Breaking News

ಸಿಗಂದೂರು ಸೇತುವೆಯಿಂದ ಜಿಗಿದು ಆತ್ಮಹತ್ಯೆಗೆ ಯತ್ನ

ಸಾಗರ: ಸಿಗಂದೂರು ನೂತನ ಸೇತುವೆ ಮೇಲಿನಿಂದ ಹಾರಿ ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಭಾನುವಾರ ನಡೆದಿದೆ.ಲೆಕ್ಕಪರಿಶೋಧಕರ ಕಚೇರಿಯ ಸಿಬ್ಬಂದಿ ಎನ್ನಲಾದ ಮೈಸೂರಿನ ಆಂಜನೇಯ (47) ಕೌಟುಂಬಿಕ ಸಮಸ್ಯೆಗಳಿಂದ ಬೇಸತ್ತು ಈ ಕೃತ್ಯವೆಸಗಿದ್ದಾರೆ ಎನ್ನಲಾಗಿದೆ.ಸೇತುವೆಯ ಮೇಲೆ ನಿಂತಿದ್ದು, ಆತ್ಮಹತ್ಯೆಗೆ ಯತ್ನಿಸಿದ ವೇಳೆ ಎಂಜಿನಿಯರ್ ರಂಜೇಶ್ ರಕ್ಷಿಸಿದ್ದಾರೆ. ನಿದ್ರೆ ಮಾತ್ರೆಗಳನ್ನು ಸೇವಿಸಿರುವ ಶಂಕೆ ಹಿನ್ನೆಲೆಯಲ್ಲಿ ಸಾಗರದ ಉಪವಿಭಾಗೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನಂತರ ಶಿವಮೊಗ್ಗಕ್ಕೆ ಸ್ಥಳಾಂತರಿಸಲಾಗಿದೆ. ತನಿಖೆ ಮುಂದುವರಿದಿದೆ.

Share News

About BigTv News

Check Also

ಹಣಕಾಸಿನ ವಿಚಾರಕ್ಕೆ ಸ್ನೇಹಿತನ ಕೊಲೆ: ಮೃತದೇಹ ಸುಟ್ಟು ನದಿಗೆ ಎಸೆದ ಆರೋಪ; ನಾಲ್ವರ ಬಂಧನ

ಬಳ್ಳಾರಿ: ಹಣಕಾಸಿನ ವಿಚಾರವಾಗಿ ನಡೆದ ಗಲಾಟೆಯಲ್ಲಿ ಸ್ನೇಹಿತನನ್ನೇ ಕೊಲೆ ಮಾಡಿ, ಸಾಕ್ಷ್ಯ ನಾಶಪಡಿಸಲು ಮೃತದೇಹವನ್ನು ಸುಟ್ಟು ಮೂಳೆ ಹಾಗೂ ಬೂದಿಯನ್ನು …

Leave a Reply

Your email address will not be published. Required fields are marked *