ಮಂಗಳೂರು: ಕಾರು ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಯೆಯ್ಯಾಡಿಯಲ್ಲಿ ಸಂಭವಿಸಿದೆ.ಸ್ಥಳೀಯ ನಿವಾಸಿ ಫೆಡ್ರಿಕ್ ಅಲ್ವಿನ್ ಫೆರ್ನಾಂಡಿಸ್ ಮೃತಪಟ್ಟವರು. ಅವರು ಶನಿವಾರ ಸಂಜೆ ಯೆಯ್ಯಾಡಿಯ ತನ್ನ ಫ್ಲ್ಯಾಟ್‌ನಿಂದ ಎದುರುಗಡೆ ಇರುವ ಅಂಗಡಿಗೆ ಹಾಲು ತರಲೆಂದು ಹರಿಪದವು ಕಡೆಗೆ ಹಾದು ಹೋಗುವ ರಸ್ತೆಯನ್ನು ದಾಟುತ್ತಿದ್ದಾಗ ಯೆಯ್ಯಾಡಿ ಕಡೆಯಿಂದ ಚಾಲಕಿ ನಿರ್ಲಕ್ಷ್ಯದಿಂದ ಚಲಾಯಿಸಿಕೊಂಡು ಬಂದ ಕಾರು ಢಿಕ್ಕಿ ಹೊಡೆಯಿತು.ಗಂಭೀರವಾಗಿ ಗಾಯಗೊಂಡ ಫೆಡ್ರಿಕ್ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಅಲ್ಲಿ ಮೃತಪಟ್ಟರು.
bigtvnews | Hubli Dharwad News | Kannada News | Karnataka News Hubli News | News In Hubli | Local news

