ಮಂಚಿ ಗ್ರಾಮದ ಪುಳಿತಪಡ್ಪು ನಿವಾಸಿ ಇದಿನಬ್ಬ ಅವರ ಪುತ್ರ ಮಹಮ್ಮದ್ ರಾಝಿಮ್ (23) ನಾಪತ್ತೆಯಾದವರು. ಅವರು ಕಾರ್ಕಳದ ಕಂಪೆನಿಯೊಂದರ ಲಾರಿಯಲ್ಲಿ ಕೆಲಸ ಮಾಡುತ್ತಿದ್ದು, ಪ್ರತಿನಿತ್ಯ ಮನೆಗೆ ಬಂದು ಹೋಗುತ್ತಿದ್ದರು.ಡಿ. 5ರಂದು ಬೆಳಗ್ಗೆ ಮನೆಯಿಂದ ಹೋದವರು ಮರಳಿ ಬಂದಿಲ್ಲ. ಹುಡುಕಾಡಿದರೂ ಪತ್ತೆಯಾಗಿಲ್ಲ, ಮೊಬೈಲ್ ಫೋನ್ ಕೂಡ ಸ್ವಿಚ್ಡ್ ಆಫ್ ಆಗಿರುತ್ತದೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ. ಬಂಟ್ವಾಳ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

