ಮುಂಬಯಿ: ಬ್ಯಾಂಕಾಕ್‌ನಿಂದ ಆಗಮಿಸಿದ 11 ಪ್ರಯಾಣಿಕರಿಂದ 33.422 ಕೆಜಿ ಹೈಡ್ರೋಪೋನಿಕ್ ಗಾಂಜಾವನ್ನು ಕಳೆದ ಐದು ದಿನಗಳಲ್ಲಿ ಮುಂಬಯಿಯ ಕಸ್ಟಮ್ಸ್ ವಲಯ-3 ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.ಡಿ. 11 – 15ರ ನಡುವೆ ಮುಂಬಯಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಎಂಟು ಪ್ರತ್ಯೇಕ ಪ್ರಕರಣಗಳಲ್ಲಿ 33.4 ಕೆಜಿ ಮಾದಕ ವಸ್ತು ವಶಪಡಿಸಿಕೊಂಡಿದ್ದಾರೆ.ಪ್ರಯಾಣಿಕರ ಮಾಹಿತಿ ಆಧರಿಸಿ ಐದು ಪ್ರಯಾಣಿಕರಿಂದ ನಾಲ್ಕು ಪ್ರಕರಣಗಳಲ್ಲಿ 16.482 ಕೆಜಿ ಶಂಕಿತ ಮಾದಕ ದ್ರವ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಶಪಡಿಸಿಕೊಳ್ಳಲಾದ ಈ ಎಲ್ಲ ಮಾದಕ ವಸ್ತುಗಳನ್ನು ಬ್ಯಾಂಕಾಕ್‌ನಿಂದ ಭಾರತಕ್ಕೆ ತರಲಾಗುತ್ತಿತ್ತು. ಅಕ್ರಮ ಮಾರುಕಟ್ಟೆಯಲ್ಲಿ ಇದರ ಮೌಲ್ಯ 33.42 ಕೋಟಿ ರೂ. ಎಂದು ಅಂದಾಜಿಸಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

