Breaking News

ಕಾಲು ಜಾರಿ ನೀರಿಗೆ ಬಿದ್ದು ವ್ಯಕ್ತಿ ಸಾವು

ಉಡುಪಿ: ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ಸಂಭವಿಸಿದೆ.ಕೊರಂಗ್ರಪಾಡಿಯ ಪೌಲ್‌ ಡಿಸಿಲ್ವಾ (55) ಮೃತರು. ಮೂರ್ಛೆ ಕಾಯಿಲೆಯಿಂದ ಬಳಲುತ್ತಿದ್ದ ಇವರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಡಿ.18ರಂದು ಬೆಳಗ್ಗೆ ಉಪಹಾರ ಮಾಡಿ ಬಹಿರ್ದೆಸೆಗೆಂದು ಹೊರಗೆ ಹೋಗಿ ಬರುತ್ತೇನೆ ಎಂದು ಮನೆಯ ಹೊರಗೆ ಹೋಗಿದ್ದು ಒಂದು ಗಂಟೆಯಾದರೂ ಮನೆಗೆ ಬಂದಿರಲಿಲ್ಲ.ಅವರ ಪತ್ನಿ ಹುಡುಕಿಕೊಂಡು ಹೋದಾಗ ಪಾಪನಾಶಿನಿ ನದಿ ತೀರದಲ್ಲಿ ಕವಚಿ ಬಿದ್ದು ತೇಲುತ್ತಿರುವ ದೇಹ ಕಂಡಿದ್ದು, ನೋಡಿದಾಗ ಪೌಲ್ ಡಿಸಿಲ್ವಾ ಅವರದ್ದಾಗಿತ್ತು. ಮೂರ್ಛೆ ರೋಗ ಅಥವಾ ಬಹಿರ್ದೆಸೆಗೆ ಬಂದಾಗ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

ಬೆಂಗಳೂರಿನಲ್ಲಿ ಮತ್ತೊಂದು ನಕಲಿ ಔಷಧ ಜಾಲ ಪತ್ತೆ, 90ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ಪೂರೈಕೆಯಾಗಿತ್ತು ಫೇಕ್ ಮೆಡಿಸಿನ್

ಬೆಂಗಳೂರು: ಮಿನರ್ವ್ ಸರ್ಕಲ್‌ನ ಕೃಪಾ ಹೆಲ್ತ್‌ಕೇರ್‌ ಮೇಲೆ ಎಸ್‌ಐಟಿ ಹಾಗೂ ಔಷಧ ನಿಯಂತ್ರಣ ಇಲಾಖೆ ಜಂಟಿಯಾಗಿ ದಾಳಿ ನಡೆಸಿ ನಕಲಿ …

Leave a Reply

Your email address will not be published. Required fields are marked *