ಹುಬ್ಬಳ್ಳಿ : ಜಗದೀಶ್ ನಗರ, ರಾಮನಗರ ವಾಜಪೇಯಿ ನಗರ ನಿವಾಸಿಗಳಿಗೆ ನೂತನ ಆಶ್ರಯ ಮನೆಗಳನ್ನು ಹಾಗೂ ಮೂಲ ಸೌಕರ್ಯಗಳನ್ನು ನೀಡದೇ ಇರುವುದನ್ನು ಖಂಡಿಸಿ ಧಾರವಾಡ ಜಿಲ್ಲಾ ಆಶ್ರಯ ಮನೆ ಬಡಾವಣೆಗಳ ವಿವಿಧ ಸಂಘ ಸಂಸ್ಥೆಗಳ ಒಕ್ಕೂಟದ ವತಿಯಿಂದ ಇದೇ ದಿ. ೧೨ ರಂದು ಶಾಸಕರಾದ ಅರವಿಂದ್ ಬೆಲ್ಲದ್ ಅವರ ನಿವಾಸದ ಮುಂದೆ ನೂರಾರು ಫಲಾನುಭವಿಗಳೊಂದಿಗೆ ೧ ದಿನದ ಪ್ರತಿಭಟನೆ ಮಾಡಲಾಗುವುದು ಎಂದು ಜಗದೀಶ್ ನಗರ ಆಶ್ರಯ ಕಮೀಟಿ ಸದಸ್ಯರಾದ ವೆಂಕಟೇಶ ದೇಸಾಯಿ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ೨೦೧೫ ನೇ ಸಾಲಿನಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣದ ಅಭಿವೃದ್ಧಿಗಾಗಿ ತಮ್ಮ ಆಶ್ರಯ ಮನೆಗಳನ್ನು ಕಳೆದುಕೊಂಡ ಆಶ್ರಯ ಮನೆಗಳ ಫಲಾನುಭವಿಗಳಿಗೆ ಇಂದಿಗೂ ನೂತರ ಮನೆಗಳನ್ನು ಮಂಜೂರು ಮಾಡಿಲ್ಲ. ಅಲ್ಲದೇ ಹಲವು ವರ್ಷಗಳಿಂದ ಆಶ್ರಯ ಬಡಾವಣೆ ಗಳಲ್ಲಿನ ಬಾಕಿ ಉಳಿದಿರುವ ಮೂಲ ಫಲಾನುಭವಿಗಳಿಗೆ ಅವರ ಮನೆಗಳನ್ನು ಮನೆಗಳನ್ನು ಋಣಮುಕ್ತ ನೋಂದಣಿ ಪತ್ರ ಮಾಡಿ ಕೊಡದೆ ಇರುವ ಇರುವುದು ಮತ್ತು ಆಶ್ರಯ ಬಡಾವಣೆಗಳಲ್ಲಿ ಮೂಲ ಸೌಕರ್ಯಗಳನ್ನು ನೀಡದಿರುವುದು ಅಸಮಾಧಾನ ಮೂಡಿಸಿದೆ ಎಂದರು.
ಮೂಲ ಸೌಕರ್ಯದಿಂದ ಜನತೆ ವಂಚಿತವಾಗಿದ್ದು, ಶಾಸಕರು ಶಾಸಕತ್ವದ ಅಧಿಕಾರದಿಂದ ಆಶ್ರಯ ಮನೆಗಳ ಮೊದಲಿನ ಮೂಲ ಫಲಾನುಭವಿಗಳ ಹೆಸರನ್ನು ರದ್ದುಪಡಿಸಿ ಮೂಲ ಫಲಾನುಭವಿಗಳ ಹೆಸರಿನಲ್ಲಿಯ ಮನೆಗಳನ್ನು ಬದಲಾಯಿಸಿ ಶಾಸಕರು ತಮಗೆ ಬೇಕಾದಂತವರನ್ನು ಗುರುತಿಸಿ ಅವರಿಗೆ ಆಶ್ರಯ ಮನೆಗಳನ್ನು ಮರು ಹಂಚಿಕೆ ಮಾಡುವರು ಎಂಬ ಆಶ್ರಯ ಮನೆಗಳ ಭೂಮಾಪಿಯಾದವರ ವದಂತಿಯಿಂದ ಮೂಲ ಆಶ್ರಯ ಮನೆಗಳ ಫಲಾನುಭವಿಗಳುವ ಭಯಬೀತರಾಗಿದ್ದಾರೆ ಎಂದು ದೂರಿದರು.
ಜಗದೀಶ್ ನಗರ ಆಶ್ರಯ ಬಡಾವಣೆ ನಿವಾಸಿಗಳ ಹಿತರಕ್ಷಣಾ ಸಮಿತಿ, ರಾಮನಗರ ಆಶ್ರಯ ಬಡಾವಣೆ ನಿವಾಸಿಗಳ ಸುಧಾರಣಾ ಸಮಿತಿ ಹಾಗೂ ವಾಜಪೇಯಿ ನಗರ ಆಶ್ರಯ ಬಡಾವಣೆ ನಿವಾಸಿಗಳ ಸುಧಾರಣಾ ಸಮಿತಿ ಮುಂತಾದ ಪ್ರಮುಖ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಪದಾಧಿಕಾರಿಗಳು ಮತ್ತು ನಿವಾಸಿಗಳು ಪ್ರತಿಭಟನೆಯಲ್ಲಿ ೧೫೦ ಜನರು ಪಾಲ್ಗೊಳ್ಳಲಿದ್ದು, ಶಾಸಕರಿಗೆ ಆಶ್ರಯ ಮನೆ, ನಿವಾಸಿಗಳ ನ್ಯಾಯಯುತ. ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮನವಿ ನೀಡಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಚನ್ನಮ್ಮ ಪಡೇಸೂರ, ನಿಂಗಪ್ಪ ಬಡಿಗೇರ ಸೇರಿದಂತೆ ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

