ಕಡಮಲಕುಂಟೆ ಬಳಿಯ ಪೆನುಗೊಂಡ- ಪಾವಗಡ ರಸ್ತೆಯಲ್ಲಿ ಶನಿವಾರ ಕಾರು- ಆಂಧ್ರಪ್ರದೇಶದ ಸರ್ಕಾರಿ ಬಸ್ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಕಾರು ಚಾಲಕ ಮೃತಪಟ್ಟಿದ್ದಾರೆ.ತಾಲ್ಲೂಕಿನ ಮೇಡಿಹಳ್ಳಿ ಗ್ರಾಮದ ರಾಜಶೇಖರರೆಡ್ಡಿ (38) ಮೃತರು. ಪಟ್ಟಣದಿಂದ ಆಂಧ್ರದ ಧರ್ಮವರಂಗೆ ಹೋಗುತ್ತಿದ್ದ ಇನ್ನೋವಾ ಕಾರು, ಪೆನುಗೊಂಡ ಕಡೆಯಿಂದ ಪಟ್ಟಣದ ಕಡೆಗೆ ಬರುತ್ತಿದ್ದ ಎಪಿಎಸ್‌ಆರ್‌ಟಿಸಿ ಬಸ್ ಮುಖಾಮುಖಿಯಾಗಿದೆ.ಬಸ್‌ನಲ್ಲಿದ್ದ ಪ್ರಯಾಣಿಕರಿಗೆ ಗಾಯಗಳಾಗಿವೆ. ಈ ರಸ್ತೆಯಲ್ಲಿ ತಿರುವುಗಳು ಹೆಚ್ಚಿವೆ. ಅನಂತಪುರಂ, ಪೆನುಗೊಂಡ, ಧರ್ಮವರಂ, ಬೆಂಗಳೂರಿಗೆ ಹೋಗುವವರು ಇದೇ ಮಾರ್ಗದಲ್ಲಿ ಸಂಚರಿಸುತ್ತಾರೆ. ರಸ್ತೆಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಿದ್ದು, ಸಾವು-ನೋವುಗಳ ಪ್ರಮಾಣವೂ ಜಾಸ್ತಿಯಾಗುತ್ತಿದೆ. ವೇಗ ನಿಯಂತ್ರಿಸುವ ಸಲುವಾಗಿ ವೈಜ್ಞಾನಿಕ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕಡಮಲಕುಂಟೆ, ಕೊಡಮಡುಗು, ಟಿ.ಎನ್.ಪೇಟೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

