ಉಡುಪಿ: ಕಲ್ಯಾಣಪುರದ ಅಭಿಷೇಕ್ (30) ಅವರು ಡಿ. 19ರಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೂಲಿ ಕಾರ್ಮಿಕರಾಗಿದ್ದ ಅವರು ಕೊಡವೂರು ಸೊಸೈಟಿ ಕ್ರಾಸ್ ಬಳಿಯ ಮನೆಯಲ್ಲಿ ತಾಯಿ ಲಲಿತಾ ಅವರೊಂದಿಗೆ ನೆಲೆಸಿದ್ದರು. ಮದ್ಯ ಸೇವನೆಯ ಅಭ್ಯಾಸವೂ ಇತ್ತೆನ್ನಲಾಗಿದೆ.ಶುಕ್ರವಾರ ಮಧ್ಯಾಹ್ನ ಅಭಿಷೇಕ್ ಮನೆಯಲ್ಲಿರುವಾಗ ತಾಯಿ ಹಾಗೂ ಚಿಕ್ಕಮ್ಮ ಕಲ್ಯಾಣಪುರಕ್ಕೆ ಹೋಗಿದ್ದರು. ಮರಳಿ ಬಂದಾಗ ಬಾಗಿಲು ಮುಚ್ಚಿತ್ತು. ಕರೆದಾಗ ತೆರೆಯದ ಕಾರಣ ನೆರೆಮನೆಯವರ ನೆರವಿನೊಂದಿಗೆ ಬಲಾತ್ಕಾರದಿಂದ ಬಾಗಿಲನ್ನು ತೆರೆದು ನೋಡಿದಾಗ ಫ್ಯಾನ್‌ಗೆ ನೇಣು ಬಿಗಿದುಕೊಂಡಿರುವುದು ಕಾಣಿಸಿತು. ಕೂಡಲೇ ಜಿಲ್ಲಾಸ್ಪತ್ರೆಗೆ ಕರೆದೊಯ್ದರೂ ಪ್ರಯೋಜನವಾಗಲಿಲ್ಲ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

