Breaking News

ಜಮ್ಮು-ಕಾಶ್ಮೀರದ ಮನೆಯಲ್ಲಿ ಆಹಾರ ತೆಗೆದುಕೊಂಡು ಹೋದ ಉಗ್ರರಿಗಾಗಿ ಶೋಧ

ಜಮ್ಮು-ಕಾಶ್ಮೀರದ ಉಧಮ್‌ಪುರ ಜಿಲ್ಲೆಯಲ್ಲಿ ಭಯೋತ್ಪಾದಕರು ಮನೆಯೊಂದರಿಂದ ಆಹಾರವನ್ನು ತೆಗೆದುಕೊಂಡು ಹೋಗಿರುವುದಾಗಿ ಮಾಹಿತಿ ದೊರೆತ ಕಾರಣ ಭದ್ರತಾ ‍ಪ‍ಡೆಗಳು ಶೋಧ ಕಾರ್ಯ ಆರಂಭಿಸಿವೆ.ಮಜಾಲ್ತಾ ಪ್ರದೇಶದಲ್ಲಿನ ಚೋರ್‌ ಮೋಟು ಮತ್ತು ಅದರ ಸಮೀಪವಿರುವ ಅರಣ್ಯ ಗ್ರಾಮಗಳಲ್ಲಿ ‍ಪೊಲೀಸರು ಮತ್ತು ಅರೆಸೇನಾ ಪಡೆಯವರು ಶೋಧ ನಡೆಸುತ್ತಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.ಇಬ್ಬರು ಭಯೋತ್ಪಾದಕರು ಶನಿವಾರ ಸಂಜೆ ಮನೆಯೊಂದಕ್ಕೆ ಬಂದು ಆಹಾರವಸ್ತುಗಳನ್ನು ಕೊಂಡುಹೋಗಿದ್ದಾರೆ ಎಂದು ಗುಪ್ತಚರ ಮಾಹಿತಿ ಬಂದಿತ್ತು. ಮಜಾಲ್ತಾ ಪ್ರದೇಶದಲ್ಲಿ ಭದ್ರತಾ ಸಿಬ್ಬಂದಿ ಮತ್ತು ಭಯೋತ್ಪಾದಕರ ನಡುವೆ ಡಿಸೆಂಬರ್ 15ರಂದು ನಡೆದಿದ್ದ ಗುಂಡಿನ ಚಕಮಕಿಯಲ್ಲಿ ಪೊಲೀಸರೊಬ್ಬರು ಮೃತಪಟ್ಟಿದ್ದರು.

Share News

About BigTv News

Check Also

ಇ-ಖಾತೆಗಾಗಿ ₹50 ಸಾವಿರ ಲಂಚಕ್ಕೆ ಬೇಡಿಕೆ; ಮೊದಲ ಕಂತು ಪಡೆಯುವಾಗ ನಗರಸಭೆ ಸಿಬ್ಬಂದಿ ಲೋಕಾಯುಕ್ತ ಬಲೆಗೆ

ಶಿಡ್ಲಘಟ್ಟ: ಇ-ಖಾತೆ ಮಾಡಿಕೊಡಲು ₹50 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು, ಮೊದಲ ಕಂತಿನ ₹25,500 ಸ್ವೀಕರಿಸುತ್ತಿದ್ದ ನಗರಸಭೆಯ ಎಸ್‌ಡಿಎ ನಾಗರಾಜ್ …

Leave a Reply

Your email address will not be published. Required fields are marked *