ಲಾರಿಯೊಂದು ಓಮ್ಮಿ ಮೇಲೆ ಪಲ್ಟಿಯಾಗಿ ಲಾರಿ ಚಾಲಕನಿಗೆ ಗಂಭೀರ ಗಾಯಗಳಾದ ಘಟನೆ ಗೂನಡ್ಕ ಬಳಿ ಡಿ.21ರಂದು ಸಂಭವಿಸಿದೆ.ಮಡಿಕೇರಿ ಕಡೆಯಿಂದ ಪೈಪ್ ಹೇರಿಕೊಂಡು ಸುಳ್ಯ ಕಡೆಗೆ ಬರುತ್ತಿದ್ದ ಲಾರಿ ಸುಳ್ಯದಿಂದ ಕಲ್ಲುಗುಂಡಿ ಕಡೆಗೆ ಹೋಗುತ್ತಿದ್ದ ಓಮ್ಮಿನಿ ಕಾರಿಗೆ ಗುದ್ದಿ ಪಲ್ಟಿಯಾಯಿತು.ಲಾರಿಯಡಿಗೆ ಓಮ್ಮಿ ಸಿಲುಕಿದ್ದು, ಓಮ್ಮಿಯಲ್ಲಿದ್ದ ಚಾಲಕ ಪಕ್ಕದ ಅಂಗಡಿಯಲ್ಲಿದ್ದ ಕಾರಣ ಯಾವುದೇ ಅಪಾಯ ಸಂಭವಿಸಿಲ್ಲ. ಜೆಸಿಬಿ ಮೂಲಕ ಲಾರಿಯನ್ನು ಮೇಲಕ್ಕೆತ್ತಲಾಗಿದ್ದು, ಲಾರಿ ಚಾಲಕನಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುವನ್ನು ಅಂಬ್ಯುಲೆನ್ಸ್ ಮೂಲಕ ಸುಳ್ಯ ಆಸ್ಪತ್ರೆಗೆ ಕರೆತರಲಾಯಿತು. ಲಾರಿ ಚಾಲಕ ಶಿವಮೊಗ್ಗದವರೆಂದು ತಿಳಿದು ಬಂದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

