ಕೈಕಂಬ: ಗುರುಪುರ ಹಳೆ ಪಂಚಾಯತ್ ಕಟ್ಟಡದ ಬಳಿಯ ಸ್ಟೆಲ್ಲಾ ಮಿಸ್ಕಿತ್ ಎಂಬವರ ದನ ಹಟ್ಟಿಗೆ ಮಧ್ಯಾಹ್ನ 3ರ ವೇಳೆಗೆ ಅಕಸ್ಮಿಕ ವಾಗಿ ಬೆಂಕಿ ತಗುಲಿ ದನ ಹಟ್ಟಿ ಹಾಗೂ ಹಟ್ಟದಲ್ಲಿದ್ದ ಅಡಿಕೆ ಯೂ ಸುಟ್ಟು ಹೋಗಿ ನಷ್ಟಸಂಭವಿಸಿದೆ.ಸ್ಟೆಲ್ಲಾ ಮಿಸ್ಕಿತ್ ಅವರ ದನದ ಹಟ್ಟಿಯಲ್ಲಿದ್ದ ದನಗಳನ್ನು ತೋಟದಲ್ಲಿ ಕಟ್ಟಿಹಾಕಿದ ಕಾರಣ ದನಗಳಿಗೆ ಯಾವುದೇ ತೊಂದರೆಯಾಗಿಲ್ಲ.ಮಧ್ಯಾಹ್ನ 3ಕ್ಕೆ ಅಕಸ್ಮಿಕವಾಗಿ ಬೆಂಕಿ ತಗುಲಿದ್ದು ಪರಿಸರದವರು ಸೇರಿ ಬೆಂಕಿಯನ್ನು ನಂದಿಸಿದ್ದಾರೆ.ಅಗ್ನಿಶಾಮಕ ದಳ ದ ವಾಹನ ಅಲ್ಲಿಗೆ ಹೋಗಲು ರಸ್ತೆ ಇಲ್ಲದ ಕಾರಣ ಪರಿಸರದವರು ಬೆಂಕಿ ನಂದಿಸಬೇಕಾಯಿತು. ಹಟ್ಟಿಸಂಪೂರ್ಣ ನಾಶವಾಗಿದ್ದು .ಹಟ್ಟದಲ್ಲಿದ್ದ ಬೆಂಕಿ ತಗುಲಿದ ಹಾನಿಯಾದ ಅಡಿಕೆಯನ್ನು ಪರಿಸರದವರು ಹಟ್ಟದಿಂದ ತೆಗೆದಿದ್ದಾರೆ.ಅಡಿಕೆ ಹಾಗೂ ಹಟ್ಟಿಸಹಿತ ಒಟ್ಟು ಮೂರು ಲಕ್ಷ ರೂಪಾಯಿ ನಷ್ಟವಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

