Breaking News

ಟ್ರ್ಯಾಕ್ಟರ್ ನಲ್ಲಿದ್ದ ನಾಲ್ವರು ಕೂಲಿ ಕಾರ್ಮಿಕರ ಮೇಲೆ 30ಕ್ಕೂ ಹೆಚ್ಚು ಜನರಿಂದ ಹಲ್ಲೆ

ದಾವಣಗೆರೆ: ಟ್ರ್ಯಾಕ್ಟರ್ ಗೆ ಪಿಕಪ್ ವಾಹನ ಟಚ್ ಆಗಿ ಗಲಾಟೆ ನಡೆದು ಕೂಲಿ ಕಾರ್ಮಿಕರ ಮೇಲೆ ಹಲ್ಲೆ ನಡೆಸಲಾಗಿದೆ. ನಾಲ್ವರ ಮೇಲೆ ಮೂವತ್ತಕ್ಕೂ ಹೆಚ್ಚು ಜನರು ಹಲ್ಲೆ ಮಾಡಿದ ಘಟನೆ ಅರಿಶಿನಘಟ್ಟ ಬಳಿ ನಡೆದಿದೆ.ದಾವಣಗೆರೆ ಜಿಲ್ಲೆ, ಚೆನ್ನಗಿರಿ ತಾಲೂಕಿನ ಅರಿಶಿನಘಟ್ಟ ಗ್ರಾಮದ ಬಳಿ ಅಡಿಕೆ ಚೀಲಗಳನ್ನು ತುಂಬಿಕೊಂಡು ಟ್ರ್ಯಾಕ್ಟರ್ ಹೋಗುತ್ತಿತ್ತು.ಬೊಲೆರೋ ಪಿಕಪ್ ವಾಹನ ಅಡಿಕೆ ಚೀಲಕ್ಕೆ ಟಚ್ ಆಗಿದ್ದರಿಂದ ಚೀಲ ಹರಿದು ರಸ್ತೆಗೆ ಅಡಿಕೆ ಚೆಲ್ಲಿದ್ದಕ್ಕೆ ಪರಸ್ಪರ ವಾಗ್ವಾದ ನಡೆದಿದೆ. ಪಿಕಪ್ ವಾಹನ ಚಾಲಕ ನಲ್ಲೂರು ಗ್ರಾಮದಿಂದ ಜನರನ್ನು ಕರೆಸಿದ್ದಾನೆ. 30ಕ್ಕೂ ಹೆಚ್ಚು ಜನರನ್ನು ಪಿಕಪ್ ವಾಹನ ಚಾಲಕ ಕರೆಸಿ ಹಲ್ಲೆ ಮಾಡಿಸಿದ್ದಾನೆ. ಗಾಯಗೊಂಡ ಕೂಲಿ ಕಾರ್ಮಿಕರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಚನ್ನಗಿರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶಿಲನೆ ನಡೆಸಿದ್ದಾರೆ.

Share News

About BigTv News

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *