ಮದುವೆಯಾದ ಬಳಿಕ ಆಗಾಗ್ಗೆ ಸಣ್ಣಪುಟ್ಟ ವಿಚಾರಕ್ಕೆ ಕೋಪ ಮಾಡಿಕೊಳ್ಳುತ್ತಿದ್ದ ಗಂಡ ಹೆಂಡತಿಯೊಂದಿಗೆ ಜಗಳ ಮಾಡುತ್ತಿದ್ದನು. ಇನ್ನು ಹೆಂಡತಿ ಮನೆಯಲ್ಲಿ ಚೆನ್ನಾಗಿ ಅಡುಗೆ ಮಾಡುತ್ತಿಲ್ಲ ಎಂಬ ಕಾರಣಕ್ಕೂ ಜಗಳ ಮಾಡುತ್ತಿದ್ದನು. ಇದೀಗ ನಿನ್ನೆ ಹೆಂಡತಿ ಸಾಂಬರ್, ಪಲ್ಯ ಚೆನ್ನಾಗಿ ಮಾಡಿಲ್ಲವೆಂದು ಜಗಳ ಮಾಡಿದ್ದಾನೆ. ಈ ಜಗಳ ಅತಿರೇಕಕ್ಕೆ ತಿರುಗಿದ್ದು, ಪತ್ನಿಯನ್ನು ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಹಿರಿಯರು ಕೇಳಿದಾಗ ಪತ್ನಿ ಸಾಕ್ಷಿತಾ ಸಾಂಬಾರ್ ಪಲ್ಯ ಸರಿಯಾಗಿ ಮಾಡಿಲ್ಲ ಎಂಬ ವಿಚಾರವಾಗಿ ಜಗಳವಾದಾಗ ಆಕ್ರೋಶದಿಂದ ಅವಳ ಎದೆ ಮೇಲೆ ಕುಳಿತು ಕತ್ತು ಹಿಸುಕಿ ಸಾಯಿಸಿದ್ದಾಗಿ ಹೇಳಿದ್ದಾನೆ. ಇನ್ನು ಘಟನಾ ಸ್ಥಳಕ್ಕೆ ಮುಧೋಳ ಪೊಲೀಸರು ತಕ್ಷಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿ ಬೀರಪ್ಪನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ದಾರುಣ ಘಟನೆ ಸಂಬಂಧಿತ ಕುಟುಂಬಗಳಿಗೆ ಮಾತ್ರವಲ್ಲ, ಗ್ರಾಮಕ್ಕೆ ಮತ್ತು ಸಮಾಜಕ್ಕೂ ತೀವ್ರ ಆಘಾತ ತಂದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

