ಬಿಜೆಪಿ ಕಾರ್ಯಕರ್ತೆ ಸುಜಾತಾ ಹಂಡೆ ವಿವಸ್ತ್ರ ಪ್ರಕರಣ ದಿನೇದಿನೇ ತಾರಕಕ್ಕೇರಿದ್ದು, ಇದೀಗ ಪೊಲೀಸ್ ಇಲಾಖೆ ತೀವ್ರ ಸಂಕಟದ ಪರಿಸ್ಥಿತಿಗೆ ಸಿಲುಕಿದಂತಾಗಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಬಿಜೆಪಿ, ನಾಳೆ ರಾಜ್ಯಾದ್ಯಂತ ಮಹಿಳೆಯರ ಪರವಾಗಿ ಹೋರಾಟಕ್ಕೆ ಇಳಿಯಲು ನಿರ್ಧರಿಸಿದೆ. ಇದರ ಜೊತೆಗೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು, ನಾಳೆ ಹತ್ತು ಗಂಟೆಗಳೊಳಗೆ ತಪ್ಪಿತಸ್ಥ ಪೊಲೀಸರನ್ನು ಸಸ್ಪೆಂಡ್ ಮಾಡಬೇಕು ಎಂದು ಸರ್ಕಾರ ಮತ್ತು ಪೊಲೀಸ್ ಇಲಾಖೆಗೆ ಗಡುವು ನೀಡಿದ್ದಾರೆ. ಇದೆಲ್ಲದರ ಮಧ್ಯೆ, ಹುಬ್ಬಳ್ಳಿ–ಧಾರವಾಡ ಪೊಲೀಸ್ ಕಮೀಷನರ್ ಅವರು ಈ ಪ್ರಕರಣದ ಕುರಿತು ನಿನ್ನೆ ಬೆಳಿಗ್ಗೆ ನೀಡಿದ ಹೇಳಿಕೆ ಮತ್ತು ಸಾಯಂಕಾಲ ನೀಡಿದ ಹೇಳಿಕೆಗಳಲ್ಲಿ ವ್ಯತ್ಯಾಸ ಕಂಡುಬಂದಿದ್ದು, ಕಮೀಷನರ್ ಸ್ವತಃ ಗೊಂದಲದಲ್ಲಿದ್ದಾರೆ ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡಿದೆ. ಮಹಿಳೆಯ ವಿವಸ್ತ್ರ ಪ್ರಕರಣದಲ್ಲಿ ನಡೆದ ತಪ್ಪಿಗೆ ಯಾರು ಹೊಣೆ? ತಪ್ಪು ಮಾಡಿದವರಿಗೆ ಶಿಕ್ಷೆಯಾಗುತ್ತದೆಯೇ? ಅಥವಾ ಯಾರೋ ಮಾಡಿದ ತಪ್ಪಿಗೆ ಇನ್ಯಾರನ್ನೋ ಬಲಿ ಕೊಡಲಿದೆಯೇ ಪೊಲೀಸ್ ಇಲಾಖೆ? ಇಲ್ಲವೇ ನಮ್ಮ ಪೊಲೀಸರ ತಪ್ಪಿಲ್ಲ ಎಂಬ ನಿಲುವಿನಲ್ಲೇ ಕಮೀಷನರ್ ಮುಂದುವರಿದು ಪೊಲೀಸರಿಗೆ ರಕ್ಷಣೆಯಾಗಿ ನಿಲ್ಲಲಿದ್ದಾರಾ?
ಈ ಎಲ್ಲ ಪ್ರಶ್ನೆಗಳ ಉತ್ತರ ನಾಳೆಯೊಳಗೆ ಸಿಗಲಿದ್ದು, ರಾಜ್ಯದ ಗಮನ ಹುಬ್ಬಳ್ಳಿಯತ್ತ ನೆಟ್ಟಿದೆ. ನಾಳೆ ಏನಾಗುತ್ತೆ ಎಂಬುದನ್ನು ಕಾದು ನೋಡಬೇಕಾಗಿದೆ…
bigtvnews | Hubli Dharwad News | Kannada News | Karnataka News Hubli News | News In Hubli | Local news

