Breaking News

ಫ್ರೀಯಾಗಿ ಎಣ್ಣೆ ಕೊಡೋ..- ಬಾರ್‌ನಲ್ಲಿ ನಾಡ ಬಂದೂಕು ಹಿಡಿದು ವ್ಯಕ್ತಿ ಹೈಡ್ರಾಮಾ!

ಬಾರ್ ನಲ್ಲಿ ಫ್ರೀಯಾಗಿ ಮದ್ಯ ಕೊಡಲು ನಿರಾಕರಿಸಿದ ಸಿಬ್ಬಂದಿಗೆ ವ್ಯಕ್ತಿಯೊಬ್ಬ ಬಂದೂಕು ಹಿಡಿದು ಬೆದರಿಸಿರುವ ಶಾಕಿಂಗ್‌ ಘಟನೆ ನಗರದ ಹೊಸಕೋಟೆಯಲ್ಲಿರುವ ಬಾರ್‌ ಒಂದರಲ್ಲಿ ನಡೆದಿದೆ.ಹೊಸಕೋಟೆ ತಾಲೂಕಿನ ಬಂಡಹಳ್ಳಿ ಗ್ರಾಮದ ಬಳಿಯ ಬಾರ್‌ನಲ್ಲಿ ಈ ಘಟನೆ ನಡೆದಿದೆ. ನೆನ್ನೆ‌ ಸಂಜೆ ವಾಹಿದ್ ಖಾನ್ ಎಂಬಾತ ಎಸ್‌ಎಸ್‌ ಬಾರ್‌ ಬಳಿ‌ ಬಂದು ಕ್ಯಾಷಿಯರ್‌ ಬಳಿ ಫ್ರೀಯಾಗಿ ಮದ್ಯ ನೀಡುವಂತೆ ಕೇಳಿದ್ದಾನೆ. ಆದರೆ ಸಿಬ್ಬಂದಿ ಕೊಡದೇ ಹೋಗಿದ್ದಕ್ಕೆ ನಾಡ ಬಂದೂಕು ತಂದು ಬಾರ್‌ ಬಳಿ ವ್ಯಕ್ತಿ ಹೈಡ್ರಾಮ ನಡೆಸಿದ್ದಾನೆ.ನನಗೆ ಎಣ್ಣೆ ಕೊಡಲ್ವ ಎಂದು ವಾಹಿದ್ ಖಾನ್ ಬಂದೂಕು ಹಿಡಿದು‌ ಹೈಡ್ರಾಮ ನಡೆಸಿದ್ದಾನೆ. ಕ್ಯಾಷಿಯರ್‌ನ ಶೂಟ್ ಮಾಡ್ತಿನಿ ಎಂದು ಕೆಲಕಾಲ ಹೈಡ್ರಾಮ ನಡೆಸಿದ್ದಾನೆ. ವ್ಯಕ್ತಿಯ ವರ್ತನೆ ಕಂಡು ಬಾರ್‌ ಸಿಬ್ಬಂದಿ ಹಾಗೂ ಕ್ಯಾಷಿಯರ್ ಬೆಚ್ಚಿ ಬಿದ್ದಿದ್ದಾರೆ. ಆಗ ಅಲ್ಲೇ‌ ಇದ್ದ ಕೆಲವರು ಬಂದೂಕು ಹಿಡಿದಿದ್ದ ವಾಹಿದ್ ಖಾನ್ ನನ್ನು ಸಮಾಧಾನ ಮಾಡಿ ವಾಪಸ್ ಕಳುಹಿಸಿದ್ದಾರೆ. ಈ ಎಲ್ಲದರೆ ದೃಶ್ಯ ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಂದಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಇಲ್ಲಿಯವರೆಗೆ ಪ್ರಕರಣ ದಾಖಲಾಗಿಲ್ಲ ಎನ್ನಲಾಗಿದೆ.

Share News

About BigTv News

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *