Breaking News

ನಿರಂತರ ಮಳೆಯಿಂದಾಗಿ ಉಕ್ಕಿ ಹರಿದ ಸೊಟ್ಟೆ ಹಳ್ಳ: ದಡದಲ್ಲಿ ಪೂಜೆ ಸಲ್ಲಿಸಿದ ರೈತರು

ಧಾರವಾಡ: ಜಿಲ್ಲೆಯಲ್ಲಿ ನಿರಂತರ ಮಳೆಯಿಂದಾಗಿ ಹಲವು ಅವಾಂತರಗಳು ಸೃಷ್ಟಿಯಾಗಿದ್ದು, ಜಿಲ್ಲೆಯ ಕುಂದಗೋಳ ತಾಲೂಕಿನಲ್ಲಿ ಸುರಿದ ಬಾರಿ ಮಳೆಯಿಂದಾಗಿ ಹಿರೇಹರಕುಣಿ ಹಾಗೂ ಶಿಶುನಾಳ ಗ್ರಾಮದ ನಡವೆ ಸಂಚಾರ ಸ್ಥಗಿತವಾಗಿದೆ. ಸೊಟ್ಟ ಹಳ್ಳದ ನೀರಿನಿಂದಾಗಿ ಗ್ರಾಮಸ್ಥರು ಹಾಗೂ ರೈತರು ಪರದಾಡುತ್ತಿದ್ದು, ಶಿಗಿ ಹುಣ್ಣಿಮೆ ಹಿನ್ನೆಲೆ ಜಮೀನಿಗೆ ತೆರಳಬೇಕಿದ್ದ ರೈತರು ಹಳ್ಳದ ದಡದಲ್ಲಿಯೇ ಪೂಜೆ ಸಲ್ಲಿಸಿ ಮರಳುವ ಸ್ಥಿತಿ ನಿರ್ಮಾಣವಾಗಿದೆ.
ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಹಿರೇಹರಕುಣಿ ಹಾಗೂ ಶಿಶುನಾಳ ಗ್ರಾಮದ ನಡುವೆ ಬರುವ ಸೊಟ್ಟ ಹಳ್ಳಕ್ಕೆ ಮಳೆ ನೀರು ತುಂಬಿ ಬಂದಿದ್ದು, ಎರಡು ಗ್ರಾಮದ ಸಂಚಾರ ಸಂಪೂರ್ಣ ಬಂದಾಗಿದೆ. ಹಳ್ಳವು ಎರಡು ಗ್ರಾಮದ ಕೊಂಡಿಯಾಗಿರುವ ರಸ್ತೆಯ ಮೇಲೆ ಹಾದು ಹೋಗುವುದರಿಂದ ಹಳ್ಳದ ನೀರು ರಸ್ತೆಯ ಆವರಿಸಿಕೊಂಡಿದೆ. ಇದರಿಂದಾಗಿ ಇಂದು ಶಿಗಿ‌ ಹುಣ್ಣಿಮೆಗೆ ರೈತರು ತಮ್ಮ ಜಮೀನುಗಳಿಗೆ ತೆರಳಿ ಪೂಜೆ ಸಲ್ಲಿಸಬೇಕಾಗಿತ್ತು. ಆದರೆ ಹಳ್ಳ ತುಂಬಿದ್ದರಿಂದ ರೈತರು ತಮ್ಮ ಜಮೀನುಗಳಿಗೆ ತೆರಳಲಾಗದೆ ಹಳ್ಳದ ದಡ್ಡದಲ್ಲಿಯೇ ಪೂಜೆ ಸಲ್ಲಿಸಿ ಮನೆಗೆ ಮರಳುವ ಸ್ಥಿತಿ ನಿರ್ಮಾಣವಾಗಿದೆ. ಜತೆಗೆ ಸರ್ಕಾರ ಹಾಗೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಹಳ್ಳದಿಂದಾಗುತ್ತಿರುವ ಸಮಸ್ಯೆಯನ್ನು ತಪ್ಪಿಸಲು ಕ್ರಮ ಕೈಗೊಳ್ಳಲು ರೈತರು ಒತ್ತಾಯ ಮಾಡುತ್ತಿದ್ದಾರೆ.‌

Share News

About BigTv News

Check Also

ವಿಟ್ಲ: 35 ಬಾರಿ ವಾರಂಟ್ ಜಾರಿಯಾಗಿದ್ದ ಆರೋಪಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ

ಕಳೆದ ಒಂಬತ್ತು ವರ್ಷಗಳಿಂದ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ವಿಟ್ಲ …

Leave a Reply

Your email address will not be published. Required fields are marked *