ಕೋಪೆನ್ಹೆಗನ್: ಗ್ರೀನ್ಲ್ಯಾಂಡ್ ಅನ್ನು ವಶಪಡಿಸಿ ಕೊಳ್ಳುವ ಅಮೆರಿಕ ಅಧ್ಯಕ್ಷ ಟ್ರಂಪ್ ಪ್ರಯತ್ನವನ್ನು ವಿರೋಧಿಸಿ ಸಾವಿರಾರು ಜನರು ಡೆನ್ಮಾರ್ಕ್ನ ರಾಜಧಾನಿ ಕೋಪೆನ್ಹೆಗನ್ನಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು. ಪ್ರತಿಭಟನಕಾರರು ಡೆನ್ಮಾರ್ಕ್ ಮತ್ತು ಗ್ರೀನ್ಲ್ಯಾಂಡ್ ಧ್ವಜ ಹಿಡಿದುಕೊಂಡಿದ್ದರಿಂದ ಕೋಪೆನ್ಹೆಗನ್ನ ರಸ್ತೆಗಳು ಕೆಂಪು ಮತ್ತು ಬಿಳಿ ಸಮುದ್ರದಂತೆ ಕಾಣುತ್ತಿತ್ತು.ಅಮೆರಿಕ ರಾಯಭಾರ ಕಚೇರಿಯವರೆಗೆ ನಡೆದ ಮೆರವಣಿಗೆಯುದ್ದಕ್ಕೂ ‘ಗ್ರೀನ್ಲ್ಯಾಂಡ್ ನಮ್ಮದು’ ಎಂಬ ಘೋಷಣೆಗಳು ಮೊಳಗಿದವು. ಕೋಪೆನ್ಹೆಗನ್, ಆರ್ಹಸ್, ಅಲ್ಬೋರ್ಗ್, ಒಡೆನ್ಸೆ ಮತ್ತು ಗ್ರೀನ್ಲ್ಯಾಂಡ್ ರಾಜಧಾನಿ ನೂಕ್ನಲ್ಲಿ ನಡೆಯಲಿರುವ ಪ್ರತಿಭಟನೆಯಲ್ಲಿ ಭಾಗಿಯಾಗುವ ಬಗ್ಗೆ ಸಾವಿರಾರು ಜನ ಸಾಮಾಜಿಕ ಜಾಲತಾಣದಲ್ಲಿ ಉತ್ಸಾಹ ತೋರಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

