Breaking News

ಹಿಂದೂ–ಮುಸ್ಲಿಂ ಒಂದೇ ಎಂಬ ಭಾವನೆ: ಪಗಡಿಗಲ್ಲಿಯಲ್ಲಿ ಸೌಹಾರ್ದದ ಈದ್ ಮಿಲಾದ್..!

ಧರ್ಮ ಬೇರೆ, ಭಾವನೆ ಒಂದೇ: ಈದ್ ಮಿಲಾದ್ ಮೆರವಣಿಗೆಯಲ್ಲಿ ಹಿಂದೂ–ಮುಸ್ಲಿಂ ಸೌಹಾರ್ದತೆ..

ಹಿಂದೂ–ಮುಸ್ಲಿಂ ಒಂದೇ ಎಂಬ ಭಾವನೆಯೊಂದಿಗೆ ಈದ್ ಮಿಲಾದ್ ಆಚರಣೆ

ಹುಬ್ಬಳ್ಳಿ: ಈದ್ ಮಿಲಾದ್ ಹಬ್ಬದ ಸಂಭ್ರಮದಲ್ಲಿ ಹಿಂದೂ–ಮುಸ್ಲಿಂ ಸೌಹಾರ್ದತೆಯ ಸಂದೇಶಕ್ಕೆ ಪಗಡಿಗಲ್ಲಿ ಸಾಕ್ಷಿಯಾಯಿತು.

ಘಂಟಿಕೇರಿ ಪೊಲೀಸ್ ಠಾಣೆ ವ್ಯಾಪ್ತಿಯ ಪಗಡಿಗಲ್ಲಿಯಲ್ಲಿ ಈದ್ ಮಿಲಾದ್ ಪ್ರಯುಕ್ತ ಅದ್ಧೂರಿ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಮುಸ್ಲಿಂ ಮುಖಂಡರು ಹಾಗೂ ಸ್ಥಳೀಯರು ಭಾಗವಹಿಸಿದ್ದು, ಹಿಂದೂ ಸಮುದಾಯದ ಹಿರಿಯರು ಕೂಡ ಸೌಹಾರ್ದತೆಯಿಂದ ಪಾಲ್ಗೊಂಡು ಹಬ್ಬದ ಸಂಭ್ರಮ ಹಂಚಿಕೊಂಡರು.

ಈ ಸಂದರ್ಭದಲ್ಲಿ ಸ್ಥಳೀಯರಾದ ಗುರು ಪಗಡಿ, ಶಿರಘಣ್ಣವರ, ಹಿರೇಮಠ ಸೇರಿದಂತೆ ಹಲವು ಹಿರಿಯರು ಮೆರವಣಿಗೆಯಲ್ಲಿ ಭಾಗವಹಿಸಿದ್ದ ಮುಖಂಡರನ್ನು ಸನ್ಮಾನಿಸಿ ಗೌರವಿಸಿದರು.

ಧರ್ಮ ಬೇರೆ, ಭಾವನೆ ಒಂದೇ ಎಂಬ ಸಂದೇಶ ಸಾರಿದ ಈ ಆಚರಣೆ, ಹಿಂದೂ–ಮುಸ್ಲಿಂ ಸಹೋದರತ್ವ ಹಾಗೂ ಸೌಹಾರ್ದತೆಗೆ ಮಾದರಿಯಾಯಿತು.

Share News

About Shaikh BigTv

Check Also

ಕೋಲಾರದಲ್ಲಿ ರೈತರು-ಅರಣ್ಯ ಇಲಾಖೆ ಮಧ್ಯೆ ಸಂಘರ್ಷ: ಸಿಬ್ಬಂದಿ ಮೇಲೆ ಮಚ್ಚಿನಿಂದ ಅಟ್ಯಾಕ್‌

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮಲ್ಲಂಪಲ್ಲಿ ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಮಚ್ಚಿನಿಂದ ಹಲ್ಲೆ ನಡೆದಿದ್ದು, ಮೂವರು ಗಂಭೀರವಾಗಿ …

Leave a Reply

Your email address will not be published. Required fields are marked *