ನವಲಗುಂದ : ರೈತನೊರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ನವಲಗುಂದ ಪಟ್ಟಣದ ಹೊರಹೊಲಯದಲ್ಲಿನ ಜಮೀನಿನಲ್ಲಿ ನಡೆದಿದೆ . ಆತ್ಮಹತ್ಯೆಗೆ ಸಾಲಭಾದೆಯೇ ಕಾರಣ ಎನ್ನಲಾಗಿದೆ . ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಯನ್ನು 48 ವರ್ಷದ ಬಸವರಾಜ ಉಣಕಲ್ ಎಂದು ಗುರುತಿಸಲಾಗಿದೆ .
ಎರಡು ಎಕರೆ ಜಮೀನಿನಲ್ಲಿ ಬೆಳೆ ಬೆಳೆದಿದ್ದ ರೈತ , 3 ಲಕ್ಷ ಸಾಲ ಪಡೆದಿದ್ದ ಆದರೆ ಅಕಾಲಿಕ ಮಳೆಯಿಂದಾಗಿ ಬೆಳೆ ಸಂಪೂರ್ಣ ಹಾನಿಯಾಗಿದ್ದು , ಈ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ . ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ
bigtvnews | Hubli Dharwad News | Kannada News | Karnataka News Hubli News | News In Hubli | Local news

