ಅಗರ್ತಲಾ: ಇಲ್ಲೋರ್ವ ವ್ಯಕ್ತಿ ಗಾಂಜಾ ಗಿಡಗಳ ತೋಟವನ್ನೇ ಮಾಡಿದ್ದು, ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಬರೋಬ್ಬರಿ 65 ಎಕರೆ ಪ್ರದೇಶದಲ್ಲಿ ಗಾಂಜಾ ಬೆಳೆದಿದ್ದಾನೆ. ಭದ್ರತಾ ಪಡೆಗಳು ದಾಳಿ ನಡೆಸಿ ಗಾಂಜಾ ಗಿಡಗಳನ್ನು ನಾಶ ಮಾಡಿದ್ದಾರೆ.ತ್ರಿಪುರಾದ ಸೋನಮುರಾ ಉಪವಿಭಾಗದಲ್ಲಿ ಈ ಘಟನೆ ನಡೆದಿದೆ. ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ 65 ಎಕರೆ ಜಾಗದಲ್ಲಿ ಗಾಂಜಾ ಬೆಳೆಯಲಾಗಿದೆ. ಸುಮಾರು 1.80 ಲಕ್ಷ ಗಾಂಜಾ ಗಿಡಗಳನ್ನು ಭದ್ರತಾ ಪಡೆಗಳು ನಾಶಪಡಿಸಿವೆ. ಗುಪ್ತಚರ ಮಾಹಿತಿ ಆಧಾರದ ಮೇಲೆ ಭ್ರತಾಪಡೆಗಳು ಸೋನಮುರಾ ಪ್ರದೇಶದ ಕಮಲಾನಗರ, ಕೃಷಡೋಲಾ, ದುಲುಂಗಾ ಹಾಗೂ ಬಿಜೋಯ್ ನಗರಗಳ ಅರಣ್ಯ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದಾಗ ಗಾಂಜಾ ಬೆಳೆ ಪತ್ತೆಯಾಗಿದೆ. 1.80 ಲಕ್ಷ ಗಾಂಜಾ ಗಿಡಗಳನ್ನು ಭದ್ರತಾಪಡೆ ನಾಶಪಡಿಸಿದ್ದು, ನಾಶಪಡಿಸಲಾದ ಗಾಂಜಾ ಮೌಲ್ಯ 27 ಕೋಟಿ ರೂ ಮೌಲ್ಯದ್ದು ಎಂದು ಅಂದಾಜಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಪೊಲೀಸರು, 81 ಬೆಟಾಲಿಯನ್ ಬಿಎಸ್ ಎಫ್, ಟಿಎಸ್ ಆರ್, ಬೆಟಾಲಿಯನ್ ಮಹಿಳಾ ಟಿ ಎಸ್ ಆರ್, ಅಸ್ಸಾಂ ರೈಫಲ್ಸ್ ಸಿಬ್ಬಂದಿಗಳು ಭಾಗಿಯಾಗಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

