ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ವೇಳೆ ರುಂಡ-ಮುಂಡ ಬೇರ್ಪಟ್ಟ ಭೀಭತ್ಸ ಘಟನೆ ಅಂಬಾಗಿಲು ಸಮೀಪದ ಕಕ್ಕುಂಜೆಯಲ್ಲಿ ಶನಿವಾರ ತಡರಾತ್ರಿ ನಡೆದಿದೆ. ಪುರುಷೋತ್ತಮ ನಾಯಕ್ (52) ಎನ್ನುವವರು ಅತ್ಮಹತ್ಯೆ ಮಾಡಿಕೊಡವರು. ನೈಲಾನ್ ಹಗ್ಗ ಬಳಸಿ ಬಾವಿಗೆ ಹಾರಿ ಅತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವೇಳೆ ರುಂಡ -ಮುಂಡ ಬೇರ್ಪಟ್ಟಿದೆ. ತೀವ್ರ ರಕ್ತ ಸ್ರಾವದಿಂದ ಬಾವಿಯ ನೀರಿನ ಬಣ್ಣವೇ ಬದಲಾಗಿತ್ತು. ಮಣಿಪಾಲದ ಹೋಟೆಲ್ ವೊಂದರಲ್ಲಿ ಎಲೆಕ್ಟ್ರಿಶಿಯನ್ ಆಗಿದ್ದ ಪುರುಷೋತ್ತಮ ನಾಯಕ್ ಅರ್ಥಿಕ ಸಮಸ್ಯೆಯಿಂದ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಗಮನಕ್ಕೆ ಬರುತ್ತಿದ್ದಂತೆ ಮನೆಯವರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಬಂದ ನೆರೆ ಹೊರೆಯವರು ಬೆಚ್ಚಿ ಬಿದ್ದಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಉಡುಪಿ ನಗರ ಪೊಲೀಸರು ತನಿಖೆ ಆರಂಭಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

