ಹುಬ್ಬಳ್ಳಿ; ಅಗ್ನಿಪಥ್ ಯೋಜನೆಯಿಂದ ರಾಷ್ಟ್ರಕ್ಕಾಗಿ ಸಮರ್ಪಿತರಾಗುವ ಸುವರ್ಣ ಅವಕಾಶ ದೊರೆಯಲಿದ್ದು ಕೇಲವರು ಅನಗತ್ಯವಾಗಿ ಗೊಂದಲ ಸೃಷ್ಟಿ ಮಾಡುತಿದ್ದಾರೆ. ಅಗ್ನಿಪಥ್ ಯೋಜನೆಯ ಮೂಲಕ ನಮ್ಮ ದೇಶದ ಅತೀ ಹೆಚ್ಚು ಯುವಕರಿಗೆ ಅಗ್ನಿವೀರರಾಗಿ ತಾಯಿಭಾರತಿಯ ಸೇವೆ ಮಾಡುವ ಹಾಗು ರಾಷ್ಟ್ರಕ್ಕಾಗಿ ಸಮರ್ಪಿತರಾಗುವ ಸುವರ್ಣ ಅವಕಾಶ ದೊರೆಯಲಿದೆ ಕೇಂದ್ರ ಗಣಿ ಕಲ್ಲಿದ್ದಲು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ನಗರದಲ್ಲಿಂದು ತಮ್ಮನ್ನ ಭೇಟಿಯಾದ ಸುದ್ದಿಗಾರರ ಜೊತೆಗೆ ಮಾತನಾಡಿದರು ಅಗ್ನಿಪಥ ಯೋಜನೆ ವಿರೋಧಿಸಿ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆಯಲ್ಲಿ ವಿದ್ರೋಹ ಶಕ್ತಿಗಳು ಸೇರಿವೆ ಇದು ಎಲ್ಲರಿಗೂ ಗೊತ್ತಿರುವ ವಿಷಯ ಎಂದರು. ಇನ್ನು ಹಲವರು ಟೂಲ್ ಕಿಟ್ ಮೂಲಕ ಇದರ ವಿರುದ್ಧ ವ್ಯವಸ್ಥಿತವಾಗಿ ಷಡ್ಯಂತ್ರ ಮಾಡಲಾಗುತ್ತಿದೆ ಸೈನ್ಯಕ್ಕೆ ಸೇರಬಯಸುವವರು ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ಹಾಳು ಮಾಡುವುದಿಲ್ಲ. ಸಂಬಂಧ ಇಲ್ಲದವರು ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ.
ಬಡಜನರ ಆಹಾರ ಪದಾರ್ಥಗಳನ್ನು ಹಾಳು ಮಾಡಲ್ಲ. ಶಾಲಾ ಮಕ್ಕಳ ಬಸ್’ಗೆ ಕಲ್ಲು ಹೊಡೆಯುವುದಿಲ್ಲ. ಪೊಲೀಸ್, ರೈಲ್ವೆ ಸ್ಟೇಷನ್’ಗೆ ಬೆಂಕಿ ಇಡುವುದಿಲ್ಲ. ಇದು ಯಾವ ರೀತಿಯ ಪ್ರತಿಭಟನೆ ಎಂದು ಅವರು ಕಿಡಿ ಕಾರಿದರು. ಇನ್ನು ಕೃಷಿ ತಿದ್ದುಪಡಿ ಕಾನೂನು ಹಾಗೂ ಅಗ್ನಿಪಥ ಯೋಜನೆ ನಡುವೆ ಹೋಲಿಕೆ ಮಾಡಲು ಸಾಧ್ಯವಿಲ್ಲ. ಯೋಜನೆಯ ಕುರಿತು ತಿಳಿವಳಿಕೆ ಮೂಡಿಸುವಲ್ಲಿ ಯಾವುದೇ ಹಿನ್ನಡೆ ಆಗಿಲ್ಲ. ಅದನ್ನು ಬಿಟ್ಟು ಹಿಂಸಾತ್ಮಕ ಪ್ರತಿಭಟನೆಗಳನ್ನು ನಡೆಸುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಬಗ್ಗೆ
ಅನೇಕ ದೃಶ್ಯ ಮಾಧ್ಯಮದಲ್ಲಿ ಯೋಜನೆ ಬಗ್ಗೆ ಅಪಪ್ರಚಾರ, ಹಿಂಸಾತ್ಮಕ ಹೋರಾಟಕ್ಕೆ ಪ್ರಚೋದನೆ ನೀಡುವ ಕೆಲಸ ಕಂಡುಬರುತ್ತಿದೆ.ಇದಕ್ಕೆ ವಿರೋಧ ಪಕ್ಷದವರು ತಮ್ಮ ಬೆಂಬಲ ನೀಡುತ್ತಿರುವುದು ಖಂಡನೀಯ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





