ಮಂಗಳೂರು: ಚಿಕಿತ್ಸೆಗೆಂದು ನಗರದ ವೆಕ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದ ಬೆಳ್ತಂಗಡಿಯ ಹರೀಶ (39) ಎಂಬವರು ನಾಪತ್ತೆಯಾಗಿದ್ದಾರೆ. ಅನಾರೋಗ್ಯವಿದ್ದ ಕಾರಣ ಬೆಳ್ತಂಗಡಿಯಿಂದ ಫೆ.7ರಂದು ಆಂಬುಲೆನ್ಸ್ ಮೂಲಕ ಕರೆದುಕೊಂಡು ಬಂದು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯ ಮೂರನೇ ವಾರ್ಡ್ ನಲ್ಲಿದ್ದ ಅವರು ಅದೇ ದಿನ ರಾತ್ರಿ 7 ಗಂಟೆಯ ವೇಳೆಗೆ ನಾಪತ್ತೆಯಾಗಿದ್ದಾರೆ. ಅವರ ಬಳಿ ಮೊಬೈಲ್ ಇಲ್ಲ. ಎಲ್ಲ ಕಡೆ ವಿಚಾರಿಸಿದರೂ, ಪತ್ತೆಯಾಗಿಲ್ಲ. ತಾಯಿ ನೀಡಿದ ದೂರಿನಂತೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 5 ಅಡಿ ಎತ್ತರ, ಸಾಧಾರಣ ಸಪೂರ ಶರೀರ, ಗೋಧಿ ಮೈಬಣ್ಣ, ದುಂಡು ಮುಖ ಹೊಂದಿದ್ದು, ಕನ್ನಡ, ತುಳು, ಹಿಂದಿ ಭಾಷೆ ತಿಳಿದಿದೆ. ಈ ಚಹರೆಯ ವ್ಯಕ್ತಿ ಪತ್ತೆಯಾದಲ್ಲಿ ಪಾಂಡೇಶ್ವರ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

