Breaking News

ಹೊತ್ತಿ ಉರಿದ ಕಾರು

ಬಳ್ಳಾರಿ : ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕವಾಗಿ ಹೊಗೆ ಕಾಣಿಸಿಕೊಂಡ ಪರಿಣಾಮ ಬೆಂಕಿಗೆ ಕಾರು ಆಹುತಿಯಾದ ಘಟನೆ ಇಲ್ಲಿನ ಗವಿಯಪ್ಪ ವೃತ್ತದ ಬಳಿ ಸೋಮವಾರ ನಡೆದಿದೆ.ಸಂಡೂರು ತಾಲೂಕಿನ ತೋರಣಗಲ್ ಎಂ.ರಾಜು ಎಂಬುವವರ ಕಾರು ಆಗಿದೆ. ತೋರಣಗಲ್‌ನಿಂದ ನಗರಕ್ಕೆ ಆಗಮಿಸುವ ವೇಳೆ ಇದ್ದಕ್ಕಿದಂತೆ ಹೊಗೆ ಕಾಣಿಸಿಕೊಂಡಿದೆ. ತಕ್ಷಣ ಚಾಲಕ ಕಾರಿನಲ್ಲಿದ್ದವರನ್ನು ಇಳಿಸಿದ್ದಾರೆ. ಅದೃಷ್ಟವಶಾತ್ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಆಗಮಿಸಿದ ಆಗ್ನಿಶಾಮಕ ದಳ ತಂಡ ಬೆಂಕಿ ನಂದಿಸಿದ್ದಾರೆ. ಸಂಚಾರ ಠಾಣಾ ಪೊಲೀಸರು ಸುಗಮ ಸಂಚಾರಕ್ಕೆ ಅನುವ ಮಾಡಿಕೊಟ್ಟರು.

Share News

About BigTv News

Check Also

ದೇರಳಕಟ್ಟೆ: ಮೆಡಿಕಲ್‌ ಕಾಲೇಜಿನಲ್ಲಿ Ragging ಪ್ರಕರಣ ದಾಖಲು

ಮಂಗಳೂರು: ದೇರಳಕಟ್ಟೆಯ ಮೆಡಿಕಲ್ ಕಾಲೇಜೊಂದರಲ್ಲಿ ಕಿರಿಯ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ರಾಗಿಂಗ್ ನಡೆಸಿ ಜೀವ ಬೆದರಿಕೆ ಹಾಕಿರುವ ಆರೋಪದಡಿ ಉಳ್ಳಾಲ …

Leave a Reply

Your email address will not be published. Required fields are marked *