Breaking News

ಯಾರು ಏನೇ ಹೇಳಿದರೂ ಸಮ್ಮಿಶ್ರ ಸರ್ಕಾರ ಸುರಕ್ಷಿತ- ಜೆಡಿಎಸ್ ಸಾರಥಿ ಹೆಚ್. ವಿಶ್ವನಾಥ ಹೇಳಿಕೆ

ಕಾಂಗ್ರೆಸ್ ನ ಅತೃಪ್ತ ಶಾಸಕರು ಬಿಜೆಪಿ ಸೇರಲಿದ್ದಾರೆ. ಆ ನಂತರ ಸಮ್ಮಿಶ್ರ 
ಪತನವಾಗಲಿದೆ ಎಂಬುದೆಲ್ಲಾ ಕೇವಲ ಊಹಾಪೋಹ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಹೇಳಿದ್ದಾರೆ.
ಹಾಸನ ಜಿಲ್ಲೆ ಹೊಳೆನರಸೀಪುರದಲ್ಲಿ ಮಾತನಾಡಿದ ಅವರು, ಇದೆಲ್ಲಾ ಮಾಧ್ಯಮಗಳ ಸೃಷ್ಟಿ ಎಂದು ನಸು ನಕ್ಕರು. ಯಾವುದೇ ರಾಜಕೀಯ ಪಕ್ಷಗಳಲ್ಲಿ ವ್ಯತ್ಯಾಸಗಳಾಗೋದು ಸಹಜ. ಅದನ್ನು ಸರಿಮಾಡಿಕೊಳ್ಳುವುದೂ ಅಷ್ಟೇ ಸಹಜ. ಏನೇ ವ್ಯತ್ಯಾಸಗಳಾದ್ರೂ ಸರಿಯಾಗುತ್ತವೆ. ಇಂಥ ಏರುಪೇರುಗಳಿಂದ ಸರಕಾರಕ್ಕೆ ಯಾವುದೇ ರೀತಿಯ ಧಕ್ಕೆಯಾಗದು ಎಂದರು.
ಬಿಜೆಪಿಯ ಶ್ರೀರಾಮುಲು ಮತ್ತು ರಮೇಶ್ ಜಾರಕಿ ಹೊಳಿಯವರು ಒಂದೇ ಸಮುದಾಯದವರು. ಅವರು ಭೇಟಿಯಾದ ತಕ್ಷಣ, ರಮೇಶ್ ಅವರು ಬಿಜೆಪಿಗೆ ಹೋಗುತ್ತಾರೆ ಎಂದು ಹೇಳಬೇಕಿಲ್ಲ ಎಂದು ಹೇಳಿದರು.
ಸಮ್ಮಿಶ್ರ ಸರಕಾರದಲ್ಲಿ ಭಾಗಿಯಾಗಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದಲ್ಲಿ ಸಮನ್ವಯತೆ ತರಲು ರಚನೆ ಮಾಡಿರುವ ಸಮನ್ವಯ ಸಮಿತಿ ಸದ್ಯ ಅಪೂರ್ಣವಾಗಿದೆ. 
ಇದಕ್ಕೆ ಜೆಡಿಎಸ್ ಹಾಗೂ ಕಾಂಗ್ರೆಸ್ ರಾಜ್ಯಾಧ್ಯಕ್ಷರು ಸೇರಿದಾಗ ಮಾತ್ರ ಪೂರ್ಣವಾಗಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಸಮಜ್ವಯ ಸಮಿತಿ ಅಧ್ಯಕ್ಷರು ಸದ್ಯ ವಿದೇಶದಲ್ಲಿದ್ದಾರೆ. ಅವರು ರಾಜ್ಯಕ್ಕೆ ಮರಳಿದ ನಂತರ ಈ ಬಗ್ಗೆ ಪೂರ್ಣ ಚರ್ಚೆ ನಡೆಯಲಿದೆ ಎಂದರು. 
ಯಾರು ಏನೇ ಹೇಳಿದ್ರೂ ಸಮ್ಮಿಶ್ರ ಸರಕಾರ ಸುರಕ್ಷಿತವಾಗಿದೆ. ಹಳ್ಳಿ ಭಾಷೆಯಲ್ಲಿ ಹೇಳುವುದಾದರೆ ಗುಂಡ್ರಗೂಳಿ ರೀತಿ ಇದೆ ಎಂದು ಹಾಸ್ಯ ಚಟಾಕಿ ಹಾರಿಸಿದರು.
ಸಚಿವ ಡಿ.ಕೆ.ಶಿವಕುಮಾರ್ ಮೇಲೆ ಐಟಿ, ಇಡಿ ಕಣ್ಣು ಪ್ರಕರಣಕ್ಕೂ, ಜಾರಕಿಹೊಳಿ ಬ್ರದರ್ಸ್ ಜಗಳಕ್ಕೂ, ಸಮ್ಮಿಶ್ರ ಸರಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ ವಿಶ್ವನಾಥ್, ಅದು ಅವರ ವೈಯಕ್ತಿಕ. ಸಚಿವ ಡಿಕೆಶಿ ಅವರಾಗಲೀ, ಸಿದ್ದರಾಮಯ್ಯ ಅವರಾಗಲೀ ಸರಕಾರ ಅಸ್ಥಿರಗೊಳಿಸಲು ಏಕೆ ಪ್ರಯತ್ನ ಮಾಡುತ್ತಾರೆ ಎಂದು ಮರು ಪ್ರಶ್ನೆ ಹಾಕಿದರು. 
ಕೇಂದ್ರ ಸರಕಾರ ತನ್ನ ಸ್ವಾಧೀನದಲ್ಲಿರುವ ಸಾಂವಿಧಾನಿಕ ಸಂಸ್ಥೆಗಳನ್ನು ಪ್ರತಿಪಕ್ಷ ಸರಕಾರಗಳ ಸಚಿವರ ಮೇಲೆ ಚೂ ಬಿಡೋದು ಸರಿಯಲ್ಲ ಎಂದ ವಿಶ್ವನಾಥ್ ಅವರಿಗೆ ಮಾಡಲು ಬೇರೆ ಕೆಲಸವಿದೆ ಎಂದು ಅಸಮಾಧಾನ ಹೊರ ಹಾಕಿದರು.
ಮುಂದಿನ ಲೋಕಸಭೆ ವೇಳೆ ಜೆಡಿಎಸ್ ರಾಜ್ಯ ಘಟಕವನ್ನು ಪುನಾರ್ರಚನೆ ಮಾಡುವ ಸಂಬಂಧ ಈಗಾಗಲೇ ಮಾಜಿ ಪ್ರಧಾನಿ ದೇವೇಗೌಡರೊಂದಿಗೆ ಚರ್ಚೆ ನಡೆಸಲಾಗಿದ್ದು, ಎಲ್ಲಾ ಸಮುದಾಯಕ್ಕೂ ಆದ್ಯತೆ ನೀಡಿ ಪಟ್ಟಿ ಅಂತಿಮಗೊಳಿಸಲಾಗಿದೆ.
ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಚರ್ಚೆ ನಡೆಯುತ್ತಿದೆ. 
ಹಾಗೆಯೇ ಪ್ರಾದೇಶಿಕ ಪಕ್ಷಗಳೂ ಒಂದಾಗಬೇಕು ಎಂಬ ಅಭಿಪ್ರಾಯವಿದೆ ಎಂದು ಹೇಳಿದ ವಿಶ್ವನಾಥ್, ನನಗೆ ರಾಷ್ಟ್ರ ರಾಜಕಾರಣಕ್ಕೆ ಹೋಗುವ ಆಸಕ್ತಿ ಇಲ್ಲ ಎಂದರು.
ಚ್.ವಿಶ್ವನಾಥ್, ಜೆಡಿಎಸ್ ರಾಜ್ಯಾಧ್ಯಕ್ಷ
Share News

About Shaikh BIG TV NEWS, Hubballi

Check Also

ಒಂದು ತಿಂಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿದ ಆರೋಪಿ ಸತೀಶ್ ಪಾತ್ರಿ..!

ಆರೋಪಿಗೆ ಠಾಣೆಯ ಮಾಹಿತಿ ಸೋರಿಕೆ ಆರೋಪ; ಕಾನ್ಸ್‌ಟೇಬಲ್ ಕಾಂತೇಶ್ ಅಮಾನತು! ಚಿಕ್ಕಮಗಳೂರು: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸತೀಶ್ ಪಾತ್ರಿ ಕಳೆದ …

Leave a Reply

Your email address will not be published. Required fields are marked *