Breaking News

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿಯೇ ತನ್ನ ಪತ್ನಿ‌ ಹಾಗೂ ಆಕೆಯ ತಾಯಿಯ ಕೊಲೆ‌…

ವಿಜಯಪುರ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿಯೇ ತನ್ನ ಪತ್ನಿ‌ ಹಾಗೂ ಆಕೆಯ ತಾಯಿಯನ್ನು ಕೊಲೆ‌ ಮಾಡಿರುವ ಘಟನೆ ವಿಜಯಪುರ ನಗರದ ನವಬಾಗ್ ಪ್ರದೇಶದಲ್ಲಿ ವರದಿಯಾಗಿದೆ. ರೂಪಾ ಮೇತ್ರಿ (32) ಹಾಗೂ ಅವರ ತಾಯಿ ಕಲ್ಲವ್ವ (55) ಕೊಲೆಯಾದವರು ಎಂದು ಗುರುತಿಸಲಾಗಿದೆ. ಮಲ್ಲಿಕಾರ್ಜುನ ಮೇತ್ರಿ ಕೊಲೆ ಆರೋಪಿ.

ನವಭಾಗ್ ಪ್ರದೇಶದ ಭಾಗವಾನ್ ಎಂಬವರಿಗೆ ಸೇರಿದ ಮನೆಯಲ್ಲಿ ಬಾಡಿಗೆಗಿದ್ದ ಮಲ್ಲಿಕಾರ್ಜುನ ಮೂವರು ಮಕ್ಕಳು, ಪತ್ನಿ ಹಾಗೂ ಅತ್ತೆಯೊಂದಿಗೆ ವಾಸವಿದ್ದನು.‌ ಕಳೆದ ಆರು ತಿಂಗಳಿಂದ ನವಭಾಗ್ ಪ್ರದೇಶದಲ್ಲಿ ಈ ಕುಟುಂಬ ನೆಲೆಸಿತ್ತು. ಪತ್ನಿ ತನ್ನ ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ, ಮನೆ ಕೆಲಸ ಮಾಡುತ್ತಿಲ್ಲ. ಮಹಿಳಾ ಹಾಗೂ ವಿವಿಧ ಸಂಘಟನೆ‌ಗಳ ಕೆಲಸದ ಕಾರಣ ಸದಾ ಮನೆಯಾಚೆ ಇರುತ್ತಾಳೆ ಎಂದು ಕೋಪಗೊಂಡಿದ್ದಾನೆ. ಇದರಿಂದ ರೋಸಿ ಹೋಗಿದ್ದ ಆರೋಪಿ ಇಂದು‌ ಬೆಳಗಿನ ಜಾವ ಮಲಗಿದ್ದ ಪತ್ನಿ ಹಾಗು ಅತ್ತೆಗೆ ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿದ್ದಾನೆ. ಬಳಿಕ ಗಾಂಧಿಚೌಕ್ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಂಧಿಚೌಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Share News

About BigTv News

Check Also

ಒಂದು ಬೆಕ್ಕಿನ ಗರ್ಭ… ಎರಡು ಮನೆಗಳ ಗಲಾಟೆ! ಕೊನೆಗೆ ಪೊಲೀಸರೇ ‘ವಿಚಿತ್ರ ತೀರ್ಪು’ ಕೊಟ್ಟ ಕಥೆ!

ನಾಲ್ಕು ಮರಿಗಳು ಹುಟ್ಟಿದವು… ಆದರೆ ಕಸ್ಟಡಿ ಯಾರಿಗೆ..? ಪೊಲೀಸರನ್ನೇ ಕಂಗೆಡಿಸಿದ ಪ್ರಕರಣ! ಬೆಕ್ಕು ಗರ್ಭಿಣಿ… ನೆರೆಹೊರೆಯವರ ಗಲಾಟೆ! ಬೆಂಗಳೂರಿನಲ್ಲಿ ‘ವಿಚಿತ್ರ’ …

Leave a Reply

Your email address will not be published. Required fields are marked *