Breaking News

ಅಪಾಯಕಾರಿ ರೀಲ್ಸ್ ; ಯುಪಿ ಯುವಕನ ಬಂಧನ

ಅಪಾಯಕಾರಿ ಸ್ಥಳಗಳಲ್ಲಿ ಮತ್ತು ಅಪಾಯಕಾರಿ ರೀತಿಯಲ್ಲಿ ರೀಲ್ಸಗಳನ್ನು ಚಿತ್ರೀಕರಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸರಿಸುತ್ತಿದ್ದ ಬಳ್ಳಾರಿ ನಿವಾಸಿ ಉತ್ತರಪ್ರದೇಶದ ಯುವಕನ್ನು ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಬಂಧಿತ ಆರೋಪಿಯು ಬಳ್ಳಾರಿ ನಗರ ನಿವಾಸಿ, ಉತ್ತರಪ್ರದೇಶದ ರಾಜ್‍ಪೂರ್ ರಾನಿಯಾ ಜಿಲ್ಲೆಯ ನಂದಾಲಪುರ ನಿವಾಸಿ ವಿಶ್ವನಾಥ್ ತಂದೆ ರಾಂಬಹದ್ದೂರ್ ವರ್ಮಾ (29) ಎಂದು ಪೊಲೀಸರು ತಿಳಿಸಿದ್ದಾರೆ. ಬಳ್ಳಾರಿ ನಗರದ ಬ್ರೂಸ್‍ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ದುರ್ಗಮ್ಮ ದೇವಸ್ಥಾನದ ರೈಲ್ವೆ ಬ್ರಿಡ್ಜ್ ಮೇಲೆ ಫೆಬ್ರವರಿ 14 ರಂದು ಅಪಾಯಕಾರಿ ರೀತಿಯಲ್ಲಿ ಡ್ಯಾನ್ಸ್ ಮಾಡುತ್ತಿರುವ ರೀಲ್ಸ್ ಚಿತ್ರೀಕರಿಸಿಕೊಂಡು, ತನ್ನ ಇನ್ಸ್ಟ್ರಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದನು. ಇದನ್ನು ಗಮನಿಸಿದ ಪೊಲೀಸರು, ತನಿಖೆ ನಡೆಸಿ, ಆರೋಪಿಯನ್ನು ಬಂಧಿಸಿದ್ದಾರೆ. ಬ್ರೂಸ್‍ಪೇಟೆ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ನಡೆದಿದೆ.

Share News

About BigTv News

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *