Breaking News

ಮದುವೆಯಾಗುವುದಾಗಿ ಮಹಿಳೆಯಿಂದ ವಂಚನೆ : ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಯುವಕ !

ಧಾರವಾಡದಲ್ಲಿ ಮದುವೆಯಾಗಿ ಮಗು ಇದ್ರೂ ಯುವಕರೊಂದಿಗೆ ಮಹಿಳೆಯೊಬ್ಬಳು ಡೇಟಿಂಗ್ ಮಾಡಿ ವಂಚಿಸಿರುವ ಘಟನೆ ನಡೆದಿದೆ. ಹೌದು, ಮಹಿಳೆಯೊಬ್ಬರು ಮೂರು ಮೂರು ಹೆಸರು ಇಟ್ಟುಕೊಂಡು ಯುವಕರೊಂದಿಗೆ ಚಾಟಿಂಗ್ ಮಾಡಿ ಲಕ್ಷಾಂತರ ರೂ. ವಂಚಿಸಿರುವ ಆರೋಪ ಕೇಳಿಬಂದಿದೆ. ಐಶ್ವರ್ಯಾ, ರೇಣುಕಾ, ಆರೋಹಿ ಹೆಸರಿನಲ್ಲಿ ವಂಚನೆ ಮಾಡಿದ್ದಾರೆ. ಮದುವೆ ಆಗೋದಾಗಿ ನಂಬಿಸಿ ಹಣ ಪಡೆದು ವಂಚನೆ ಮಾಡಿದ್ದಾರೆ. ಧಾರವಾಡದಲ್ಲಿ ಗುರು ಎಂಬಾತನಿಂದ 7 ಲಕ್ಷ ರೂ. ಪಡೆದಿದ್ದು. ಮದುವೆ ಆಗದೇ ಐಶ್ವರ್ಯ ಕಳ್ಳಾಟ ಆಡುತ್ತಿದ್ದು, ಮನನೊಂದ ಯುವಕ ಗುರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸದ್ಯ ಯುವಕ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ವಂಚಕಿಯ ಜಾಲ ಬಗೆದಷ್ಟು ಬಯಲಾಗುತ್ತಿದೆ.

Share News

About BigTv News

Check Also

ಬೆಂಗಳೂರು | ಸಿಕ್ಕವರ ಮೇಲೆ ಮಚ್ಚು ಬೀಸಿದ ದುಷ್ಕರ್ಮಿಗಳು: ಎಂಟು ಮಂದಿಗೆ ಗಾಯ

ಬೆಂಗಳೂರು: ಮಾಸ್ಕ್ ಧರಿಸಿ ನಾಲ್ಕು ಬೈಕ್‌ಗಳಲ್ಲಿ ಬಂದಿದ್ದ ಎಂಟು ಮಂದಿ ದುಷ್ಕರ್ಮಿಗಳು ಉತ್ತರಹಳ್ಳಿ ಮುಖ್ಯರಸ್ತೆ ಹಾಗೂ ಅರಹಳ್ಳಿ ಗೇಟ್ ಬಳಿ …

Leave a Reply

Your email address will not be published. Required fields are marked *