ಬೆಂಗಳೂರು: ಕೆಂಗೇರಿಯ ರಾಜರತ್ನ ಹೋಟೆಲ್‌ನಲ್ಲಿ ತಡರಾತ್ರಿ ಹೋಟೆಲ್ ಬಂದ್ ಆದ ಬಳಿಕ ನುಗ್ಗಿದ ಕಿಡಿಗೇಡಿಗಳು ಊಟ ಕೇಳಿದ್ದು, ನಿರಾಕರಿಸಿದ ಹಿನ್ನೆಲೆ ಸಿಬ್ಬಂದಿಗೆ ಬೆದರಿಕೆ ಹಾಕಿ ದಾಂಧಲೆ ನಡೆಸಿದ್ದಾರೆ. ಹೋಟೆಲ್ ಮಾಲೀಕ ಮಧುಕಿರಣ್ 112ಕ್ಕೆ ಕರೆ ಮಾಡಿದ ಬಳಿಕ ಹೊಯ್ಸಳ ಪೊಲೀಸರು ಸ್ಥಳಕ್ಕೆ ಬಂದು ಕೆಲವರನ್ನು ವಶಕ್ಕೆ ಪಡೆದಿದ್ದರು. ಆದರೆ, ದೂರು ನೀಡುವ ಸಂಬಂಧ ಕೆಂಗೇರಿ ಇನ್ಸ್‌ಪೆಕ್ಟರ್‌ಗೆ ಕರೆ ಮಾಡಿದಾಗ ಅವಾಚ್ಯವಾಗಿ ಮಾತನಾಡಿರುವ ಆಡಿಯೋ ವೈರಲ್ ಆಗಿದೆ. ಸ್ಥಳೀಯ ಪೊಲೀಸರು ಸರಿಯಾಗಿ ದೂರು ದಾಖಲಿಸದೇ ಆರೋಪಿಗಳನ್ನು ಬಿಟ್ಟು ಕಳುಹಿಸಿದ್ದಾರೆ ಎಂದು ಹೋಟೆಲ್ ಮಾಲೀಕರು ಆರೋಪಿಸಿದ್ದು, ಪ್ರಕರಣ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

