Breaking News

ಅಪರಾಧ ಸುದ್ದಿ: ತೀರ್ಥಹಳ್ಳಿ: ಪ್ರೀತಿಗೆ ನಿರಾಕರಣೆ; ಯುವತಿಗೆ ಚಾಕು ಇರಿತ

ತೀರ್ಥಹಳ್ಳಿ: ಪ್ರೀತಿಸಲು ನಿರಾಕರಿಸಿದ್ದಕ್ಕೆ ಯುವಕನೊಬ್ಬ ಯುವತಿಯ ಮೇಲೆ ಬಿಯರ್ ಬಾಟಲಿಯಿಂದ ಚುಚ್ಚಿ, ಹಲ್ಲೆ ಮಾಡಿದ ಘಟನೆ ತೀರ್ಥಹಳ್ಳಿ ಭಾಗದಲ್ಲಿ ನಡೆದಿದೆ. ತೂದೂರು ಗ್ರಾಮದ ನಿವಾಸಿಯಾದ ಸ್ವರೂಪ್ ಕಳೆದ ಆರು ತಿಂಗಳಿನಿಂದ ಅಪೂರ್ವ ಎನ್ನುವ ಯುವತಿಯನ್ನು ಪ್ರೀತಿಸುತ್ತಿದ್ದು, ಆಕೆಗೂ ತನ್ನನ್ನು ಪ್ರೀತಿಸುವಂತೆ ಒತ್ತಾಯಿಸುತ್ತಿದ್ದ. ಪ್ರೀತಿ ಮಾಡಲು ಒಪ್ಪದಿದ್ದರೆ ಕೊಲೆ ಮಾಡುವುದಾಗಿ ಕೂಡ ಈ ಹಿಂದೆ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಈಚೆಗೆ ಸ್ವರೂಪ್ ಇದ್ದಕ್ಕಿದ್ದಂತೆ ಅಪೂರ್ವಳ ಮನೆಗೆ ಬಂದಿದ್ದಾನೆ. ಇದಕ್ಕೆ ಅಪೂರ್ವ ಅವರ ತಾಯಿ ವಿರೋಧ ವ್ಯಕ್ತಪಡಿಸಿದ್ದರಿಂದ, ಸ್ವರೂಪ್ ಅಪೂರ್ವ ಅವರ ತಾಯಿಯನ್ನು ಮನೆಯಿಂದ ಹೊರಗೆ ತಳ್ಳಿ ಬಾಗಿಲು ಹಾಕಿಕೊಂಡಿದ್ದಾನೆ. ಬಳಿಕ ಮನೆಯ ಒಳಗಡೆ ಅಪೂರ್ವಳನ್ನು ಉಳಿಸಿಕೊಂಡು, ಬಾಗಿಲನ್ನು ಭದ್ರಪಡಿಸಿ ತಾನು ತಂದಿದ್ದ ಬಿಯರ್ ಬಾಟಲಿಯಿಂದ ಅಪೂರ್ವಳ ಕತ್ತಿನ ಭಾಗ, ಹೊಟ್ಟೆ, ಬೆನ್ನು ಭಾಗಕ್ಕೆ ಮನಸೋಇಚ್ಛೆ ಚುಚ್ಚಿ, ಆಕೆಯನ್ನು ಗಾಯಗೊಳಿಸಿದ್ದಾನೆ. ಈ ಸಂದರ್ಭದಲ್ಲಿ ಅಪೂರ್ವ ಅವರ ತಂದೆ ಸುಧಾಕರ್ ಅವರು ಬಾಗಿಲನ್ನು ಒಡೆದುಕೊಂಡು, ಮನೆಯೊಳಗೆ ಬಂದು ಅಪೂರ್ವಳ ರಕ್ಷಣೆ ಮಾಡಿದ್ದು, ಸ್ವರೂಪ್ ತಕ್ಷಣ ಅಲ್ಲಿಂದ ಪರಾರಿಯಾಗಿದ್ದಾನೆ. ಗಾಯಗೊಂಡ ಅಪೂರ್ವಳನ್ನು ತಾಲ್ಲೂಕು ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ಸೇರಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ತೀರ್ಥಹಳ್ಳಿಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಸ್ವರೂಪ್ ಬಂಧನಕ್ಕೆ ಬಲೆ ಬೀಸಿದ್ದಾರೆ.

Share News

About BigTv News

Check Also

ಇಬ್ಬರ ಜಗಳ ಬಿಡಿಸಲು ಹೋದ ಯುವಕನ ಕತ್ತು ಸೀಳಿ ಭೀಕರ ಕೊಲೆ!

ಮಂಡ್ಯ: ಹಣಕಾಸಿನ ವಿಚಾರವಾಗಿ ನಡೆಯುತ್ತಿದ್ದ ಗಲಾಟೆಯನ್ನು ಬಿಡಿಸಲು ಹೋದ 25 ವರ್ಷದ ನಂದನ್ ಎಂಬ ಯುವಕನನ್ನು ಡ್ರ್ಯಾಗರ್‌ನಿಂದ ಕತ್ತು ಸೀಳಿ …

Leave a Reply

Your email address will not be published. Required fields are marked *