ತೆಲಂಗಾಣ: ಹೈದರಾಬಾದ್ ಸ್ಪೆಷಲ್ ಧಮ್ ಬಿರಿಯಾನಿ ಅಂದ್ರೆ ಮಾಂಸ ಪ್ರಿಯರಿಗೆ ಅಚ್ಚುಮೆಚ್ಚು. ಇನ್ನು ರುಚಿ ರುಚಿಯಾದ ಬಿರಿಯಾನಿಗೆ ಫಿದಾ ಆಗಿ ಬೆಲೆ ಎಷ್ಟೇ ಆದ್ರೂ ಜನ ಮಾತ್ರ ತಿನ್ನೋದನ್ನ ಬಿಡೋಲ್ಲ. ಹೀಗಿರೋವಾಗ ಬಿರಿಯಾನಿ ಬೆಲೆ ಕಡಿಮೆಯಾದ್ರೆ ಯಾರಿಗೆ ತಾನೇ ಖುಷಿಯಾಗಲ್ಲ ಹೇಳಿ. ಆದ್ರೆ ಬಿರಿಯಾನಿ ಬೆಲೆ ಕಡಿಮೆ ಆಗಿರೋದು ಯಾವುದೇ ಹೋಟೆಲ್, ರೆಸ್ಟೋರೆಂಟ್ಗಳಲ್ಲಿ ಅಲ್ಲ. ಬದಲಾಗಿ ತೆಲಂಗಾಣದಲ್ಲಿ ನಡೀತಿರೋ ಎಲೆಕ್ಷನ್ಗೆ ನಿಂತಿರೋ ಅಭ್ಯರ್ಥಿಗಳಿಗಾಗಿ. ಚುನಾವಣೆ ವೇಳೆ ಅಭ್ಯರ್ಥಿಗಳು ತಮ್ಮ ಪಕ್ಷದ ಕಾರ್ಯಕರ್ತರಿಗೆ ಹಂಚುವ ಊಟಕ್ಕೆ ಅಂತಾನೇ ಅಪಾರ ಪ್ರಮಾಣದ ಹಣ ಖರ್ಚು ಮಾಡ್ತಾರೆ. ಹೀಗಾಗಿ ಚುನಾವಣಾ ವೆಚ್ಚ ಕಡಿಮೆ ಮಾಡಬೇಕು ಅನ್ನೋ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳಿಗೆ ಬಿರಿಯಾನಿ ಬೆಲೆ ಕಡಿಮೆ ಮಾಡಿ ಅಂತಾ ತೆಲಂಗಾಣ ಮುಖ್ಯ ಚುನಾವಣಾ ಅಧಿಕಾರಿ ರಜತ್ ಕುಮಾರ್ ಪ್ರಸ್ತಾಪ ಮಾಡಿದ್ದಾರೆ. ಅದರಂತೆ ಮಟನ್ ಬಿರಿಯಾನಿ 170ರೂ.ನಿಂದ 140ರೂಪಾಯಿಗೆ , ಚಿಕನ್ ಬಿರಿಯಾನಿ 140 ರೂಪಾಯಿಯಿಂದ 120 ಕ್ಕೆ ಇಳಿಸುವಂತೆ ಮನವಿ ಮಾಡಿದ್ದಾರೆ. ಇದರ ಜೊತೆಗೆ ಲೆಮನ್ ರೈಸ್ ಬೆಲೆ 40 ರಿಂದ 30 ರೂ.ಗೆ ಇಳಿಸುವಂತೆ ಪ್ರಸ್ತಾಪಿಸಿದ್ದಾರೆ
bigtvnews | Hubli Dharwad News | Kannada News | Karnataka News Hubli News | News In Hubli | Local news





