ಚಿಂತಾಮಣಿ: ತಾಲ್ಲೂಕಿನ ಕನಿಶೆಟ್ಟಹಳ್ಳಿ ಗ್ರಾಮದಲ್ಲಿ ಶನಿವಾರ ಸಂಜೆ ಕಾಣೆಯಾಗಿದ್ದ ಬಾಲಕ ಕರುಣಾಕರ (3)ನ ಶವ ಮನೆಯ ಸಮೀಪಸ ಕೃಷಿ ಹೊಂಡದಲ್ಲಿ ಭಾನುವಾರ ಪತ್ತೆಯಾಗಿದೆ. ಮನೆ ಬಳಿ ಆಟವಾಡುತ್ತಿದ್ದ ಬಾಲಕ ಶನಿವಾರ ಸಂಜೆ ಕಾಣೆಯಾಗಿದ್ದ. ಮನೆಯವರು ಎಲ್ಲ ಕಡೆ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಅನುಮಾನಗೊಂಡು ಭಾನುವಾರ ಅಗ್ನಿಶಾಮಕದಳಕ್ಕೆ ದೂರು ನೀಡಿ ಮನೆಯ ಸಮೀಪದಲ್ಲೇ ಇರುವ ಕೃಷಿಹೊಂಡದಲ್ಲಿ ಹುಡುಕಾಡಿಸಿದಾಗ ಬಾಲಕನ ಶವ ದೊರೆತಿದೆ. ಬಾಲಕ ಆಟವಾಡುವಾಗ ಆಕಸ್ಮಿಕವಾಗಿ ಕೃಷಿಹೊಂಡಕ್ಕೆ ಬಿದ್ದು ಮೃತಪಟ್ಟಿರಬಹುದು ಎನ್ನಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

