Breaking News

ಬಿಲ್‌ ಕಲೆಕ್ಟರ್‌ ಬಸವರಾಜ, ಎಸ್‌ಡಿಎ ಅನ್ನಪೂರ್ಣ ಅಮಾನತು

ಧಾರವಾಡ: ಚುನಾವಣೆ (ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ) ಕಾರ್ಯದಲ್ಲಿ ನಿರ್ಲಕ್ಷ್ಯ ವಹಿಸಿದ್ಧಾರೆ ಎಂದು ಹು-ಧಾ ಮಹಾನಗರ ಪಾಲಿಕೆ ಬಿಲ್‌ ಕಲೆಕ್ಟರ್‌ ಬಸವರಾಜ ನಿಗದಿ, ಜಿಲ್ಲಾ ಕೇಂದ್ರ ಗ್ರಂಥಾಲಯದ ಎಸ್‌ಡಿಎ ಅನ್ನಪೂರ್ಣ ಎಸ್‌.ಸವದಿ ಅವರನ್ನು ಸೋಮವಾರ ಅಮಾನತುಗೊಳಿಸಲಾಗಿದೆ. ಜಿಲ್ಲಾಧಿಕಾರಿ ಸ್ನೇಹಲ್‌ ಆರ್‌. ಅವರು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಸೂಚನೆ ನೀಡಿದರೂ ಮತಗಟ್ಟೆ ಅಧಿಕಾರಿಗಳಾದ ಬಸವರಾಜ ನಿಗದಿ (ಭಾಗ ಸಂಖ್ಯೆ 137) ಮತ್ತು ಅನ್ನಪೂರ್ಣ ಎಸ್‌. ಸವದಿ (ಭಾಗ ಸಂಖ್ಯೆ 160) ಅವರು ಪ್ರೊಜನಿ ಮ್ಯಾಪಿಂಗ್‌ ಕಾರ್ಯ ಆರಂಭಿಸಿಲ್ಲ. ಇಬ್ಬರೂ ವಹಿಸಿದ ಕಾರ್ಯನಿರ್ವಹಿಸದಿರುವುದು, ನಿರ್ಲಕ್ಷ್ಯ ವಹಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಆದೇಶದಲ್ಲಿ ತಿಳಿಸಿದ್ಧಾರೆ.

Share News

About BigTv News

Check Also

ಬೆಂಗಳೂರು | ಸಿಕ್ಕವರ ಮೇಲೆ ಮಚ್ಚು ಬೀಸಿದ ದುಷ್ಕರ್ಮಿಗಳು: ಎಂಟು ಮಂದಿಗೆ ಗಾಯ

ಬೆಂಗಳೂರು: ಮಾಸ್ಕ್ ಧರಿಸಿ ನಾಲ್ಕು ಬೈಕ್‌ಗಳಲ್ಲಿ ಬಂದಿದ್ದ ಎಂಟು ಮಂದಿ ದುಷ್ಕರ್ಮಿಗಳು ಉತ್ತರಹಳ್ಳಿ ಮುಖ್ಯರಸ್ತೆ ಹಾಗೂ ಅರಹಳ್ಳಿ ಗೇಟ್ ಬಳಿ …

Leave a Reply

Your email address will not be published. Required fields are marked *