ಬೆಂಗಳೂರು: ಯೂತ್ ಕಾಂಗ್ರೆಸ್ ಉಪಾಧ್ಯಕ್ಷೆ ದಿವ್ಯಾ ಆರ್.ಕೆ ಮೇಲೆ ಲಾಂಗ್ ಮತ್ತು ಮಚ್ಚು ಹಿಡಿದು ಹಲ್ಲೆ ಮಾಡಲು ಯತ್ನಿಸಿದ ಘಟನೆ ಭಾನುವಾರ ಸಂಜೆ ನಡೆದಿದೆ. ಪ್ರಕರಣ ಸಂಬಂಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ನಾಲ್ವರು ಯುವಕರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಭಾನುವಾರ ಸಂಜೆ ಸುಮಾರು 7:30ರ ವೇಳೆಗೆ ದಿವ್ಯಾ ಅವರು ತಮ್ಮ ಮಗನ ಸ್ನೇಹಿತರನ್ನು ಮನೆಗೆ ಬಿಡಲು ತಲಕಾವೇರಿ ಬಡಾವಣೆಗೆ ತೆರಳುತ್ತಿದ್ದರು. ಈ ವೇಳೆ ರಸ್ತೆ ಮೇಲೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಕಾರಿನಲ್ಲಿ ಸಿಗರೇಟ್ ಸೇದುತ್ತಾ ಕುಳಿತಿದ್ದ ಯುವಕರಿಗೆ ಕಾರನ್ನು ಪಕ್ಕಕ್ಕೆ ಹಾಕುವಂತೆ ಹಾಗೂ ಟ್ರಾಫಿಕ್ ಜಾಮ್ ಆಗಿರುವುದಾಗಿ ದಿವ್ಯಾ ಸೂಚಿಸಿದ್ದಾರೆ. ಇದಕ್ಕೆ ಕೋಪಗೊಂಡ ಆರೋಪಿಗಳು ಆರೋಪಿಗಳು ಕಾರಿನಿಂದ ಲಾಂಗ್ ಮತ್ತು ಮಚ್ಚು ತೆಗೆದುಕೊಂಡು ಹೊರಬಂದು, “ನಿನ್ನ ತಲೆ ಒಡಿತಿವಿ, ನಾವು ಯಾರು ಗೊತ್ತಾ?” ಎಂದು ಬೆದರಿಕೆ ಹಾಕಿದರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಘಟನೆ ಸಂಬಂಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ನಾಲ್ವರು ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

