Breaking News

ಕಳ್ಳರಿಂದ 13 ಗ್ರಾಂ ಚಿನ್ನ, 33 ಗ್ರಾಂ ಬೆಳ್ಳಿ ಜಪ್ತಿ

ಮಸ್ಕಿ: ತಾಲೂಕಿನ ಬಳಗಾನೂರಿನಲ್ಲಿ ನಡೆದ ಕಳ್ಳತನಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಸ್ಥಳೀಯ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಹೆಡಗಿನಾಳದ ಶಿವಪ್ಪ ಗಿಡ್ಡ ಹಾಗೂ ರುದ್ರಗೌಡ ಬಂಧಿತರು. ಇವರಿಂದ 13 ಗ್ರಾಂ ಚಿನ್ನ, 33 ಗ್ರಾಂ ಬೆಳ್ಳಿ ಹಾಗೂ 20 ಸಾವಿರ ನಗದು ವಶಪಡಿಸಿಕೊಂಡಿದ್ದಾರೆ. ಕಳ್ಳತನಕ್ಕೆ ಪ್ರಕರಣಕ್ಕೆ ಸಂಬಂಧಿಸಿ ಎಸ್ಪಿ ಅರುಣಾಂಗ್ಶು ಗಿರಿ, ಎಎಸ್ಪಿಗಳಾದ ಎಸ್.ಜೆ ಕುಮಾರಸ್ವಾಮಿ ಮತ್ತು ಹರೀಶ ಜಿ. ಹಾಗೂ ಡಿಎಸ್ಪಿ ಚಂದ್ರಶೇಖರ ಮಾರ್ಗದರ್ಶನಲ್ಲಿ ಸಿಪಿಐ ವಿನಾಯಕ, ಬಳಗಾನೂರು ಪಿಎಸ್‌ಐ ಎರಿಯಪ್ಪ ಅಂಗಡಿ ಹಾಗೂ ಪೊಲೀಸರು ಕಾರ‌್ಯಚರಣೆ ನಡೆಸಿದ್ದರು. ತ್ವರಿತವಾಗಿ ಕಳ್ಳತನ ಪ್ರಕರಣ ಭೇದಿಸಿದ್ದಕ್ಕೆ ಎಸ್ಪಿ ಅಭಿನಂದಿಸಿದ್ದಾರೆ.

Share News

About BigTv News

Check Also

ಗೃಹಪ್ರವೇಶದ ನಂತರ ಬೆಂಗಳೂರು ಟೆಕ್ಕಿಗೆ ಕಾದಿತ್ತು ಶಾಕ್: 12 ಲಕ್ಷ ಮೌಲ್ಯದ ಚಿನ್ನ ಕದ್ದ ಕಳ್ಳರು, FIRಗೂ ಅಲೆದಾಟ

ಬೆಂಗಳೂರು: ಹೊಸ ಮನೆಯ ಗೃಹಪ್ರವೇಶದ ಸಂಭ್ರಮದಲ್ಲಿದ್ದ ಸಾಫ್ಟ್‌ವೇರ್ ಎಂಜಿನಿಯರ್ ಕುಟುಂಬದ 80 ಗ್ರಾಂ ಚಿನ್ನಾಭರಣ ಕಳವಾಗಿದ್ದು, ಮೌಲ್ಯ ಸುಮಾರು ₹12 …

Leave a Reply

Your email address will not be published. Required fields are marked *