ಇಲ್ಲಿನ ಪ್ರಮುಖ ವಾಣಿಜ್ಯ ಸಂಕೀರ್ಣದ ಒಂದನೇ ಮಹಡಿಯಲ್ಲಿರುವ ಎಸ್ ಪಿ ಕ್ರಿಯೇಷನ್ ಕ್ಲಬ್ ನಲ್ಲಿ ಹಣವನ್ನು ಪಣವಾಗಿಟ್ಟುಕೊಂಡು ಇಸ್ಪಿಟ್ ಜುಗಾರಿ ಆಡುತ್ತಿರುವ ಕುರಿತು ನಿಖರ ಮಾಹಿತಿಯ ಮೇರೆಗೆ ಕೋಟ ಪೊಲೀಸ್ ಉಪನಿರೀಕ್ಷ ಪ್ರವೀಣ್ ಕುಮಾರ್ ಹಾಗೂ ಅವರ ತಂಡ ಮಂಗಳವಾರ ಸಂಜೆ ದಾಳಿ ನಡೆಸಿ, 10 ಮಂದಿಯನ್ನು ಬಂಧಿಸಿ , 65,664 ರೂ.ಹಾಗೂ ಇತರ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಸದಾಶಿವ ದೇವಾಡಿಗ, ಜಯರಾಮ, ರಾಘವೇಂದ್ರ, ಗಣೇಶ, ದಯಾನಂದ, ಪ್ರಭಾಕರ, ಸದಾಶಿವ, ಜಯರಾಜ್ ಶೆಟ್ಟಿ, ಆನಂದ, ಹರೀಶ ಬಂಧಿತರು. ಈ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

