ಗುಂಡ್ಲುಪೇಟೆ(ಚಾಮರಾಜನಗರ): ಪಡಿತರ ಅಕ್ಕಿ ಸಾಗಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ತೆರಕಣಾಂಬಿ ಠಾಣೆ ಪೊಲೀಸರು ಬಂಧಿಸಿರುವ ಘಟನೆ ತಾಲೂಕಿನ ಪರಮಾಪುರ ಗ್ರಾಮದ ಬಳಿ ಮಾ.14ರ ಶನಿವಾರ ನಡೆದಿದೆ. ಟಿ.ನರಸೀಪುರ ತಾಲೂಕಿನ ಹಳೇ ನರಿಪುರ ಗ್ರಾಮದ ಹುಸೇನ್(28) ಮತ್ತು ನಿಸಾರ್ ಅಹಮದ್(52) ಬಂಧಿತ ಆರೋಪಿಗಳು. ಚಾಲಕ ಹುಸೇನ್ ಮತ್ತು ನಿಸಾರ್ ಅಹಮದ್ ಇಬ್ಬರು ಮಹೀಂದ್ರ ಮ್ಯಾಕ್ಸಿಮ್ ಗೂಡ್ಸ್ ವಾಹನದಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಸಾಗಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ತೆರಕಣಾಂಬಿ ಪೊಲೀಸ್ ಠಾಣೆಯ ಆರಕ್ಷಕ ಉಪ ನಿರೀಕ್ಷಕ ಮಹೇಶ್.ಕೆ.ಎಂ. ನೇತೃತ್ವದ ತಂಡ ದಾಳಿ ನಡೆಸಿದೆ. ಗೂಡ್ಸ್ ವಾಹನದಲ್ಲಿದ್ದ 37 ಮೂಟೆಯಲ್ಲಿರಿಸಿದ್ದ 1,846 ಕೆ.ಜಿ. ಪಡಿತರ ಅಕ್ಕಿಯನ್ನು ವಶಕ್ಕೆ ಪಡೆದು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಸಂಬಂಧ ತೆರಕಣಾಂಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

