ರಾಂಚಿ : ರಾಜಧಾನಿಯಲ್ಲಿ ಬೃಹತ್ ಮೊಬೈಲ್ ಕಳ್ಳತನದ ಜಾಲ ಇರುವುದು ಪತ್ತೆಯಾಗಿದೆ. ಗೋದಾಮಿನಿಂದ 50 ಲಕ್ಷ ಮೌಲ್ಯದ ಮೊಬೈಲ್ ಕಳ್ಳತನವಾಗಿರುವ ಘಟನೆ ಜಾರ್ಖಂಡ್ನಲ್ಲಿ ನಡೆದಿದೆ. ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಕಳೆದು ತಿಂಗಳು ಮೂರು ಕೋಟಿಗೂ ಅಧಿಕ ಬೆಲೆಬಾಳುವ ಮೊಬೈಲ್ಗಳು ಕಳ್ಳತನವಾಗಿರುವುದರ ಬಗ್ಗೆ ಗಮನಕ್ಕೆ ಬಂದಿದೆ.
ಕಳ್ಳತನ ಕುರಿತು ಪ್ರಾಜೆಕ್ಟ್ ಸಪ್ಲೈ ಚೈನ್ ಸೊಲ್ಯೂಷನ್ಸ್ ಲಿಮಿಟೆಡ್‌ನ ಗೋದಾಮಿನ ವ್ಯವಸ್ಥಾಪಕ ಮೊಹಮ್ಮದ್ ಜಮೀರ್ ಬಾರಿ ಖಾನ್ ಅವರು ದೂರು ಸಲ್ಲಿಸಿದ್ದಾರೆ. ಈ ಕಳ್ಳತನ ಕುರಿತು ನಗರದ ಪುಂಡಗಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಪುಂಡಗಾನಲ್ಲಿರುವ ನಮ್ಮ ಗೋಡೌನ್‌ನಲ್ಲಿ ಅಪರಿಚಿತ ಕಳ್ಳರು ಸುಮಾರು 50 ಲಕ್ಷಕ್ಕೂ ಅಧಿಕ ಬೆಲೆ ಬಾಳುವ ಮೊಬೈಲ್ಗಳನ್ನು ಕಳ್ಳತನ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





