Breaking News

ರೌಡಿಗಳಿಗೆ ಪಿಸ್ತೂಲ್‌ ಮಾರಾಟ: ಆರೋಪಿ ಬಂಧನ

ಬೆಂಗಳೂರು: ರೌಡಿಶೀಟರ್‌ ಹಾಗೂ ಕಾನೂನು ಬಾಹಿರ ಚಟುವಟಿಕೆ ನಡೆಸುತ್ತಿದ್ದವರಿಗೆ ಕಂಟ್ರಿ ಮೆಡ್‌ ಪಿಸ್ತೂಲ್‌, ರಿವಾಲ್ವರ್‌ಗಳನ್ನು ಮಾರುತ್ತಿದ್ದ ಭೂಪಾಲ್‌ ಮೂಲದ ಆರೋಪಿಯನ್ನು ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಬಂಧಿಸಿದೆ. ಮಧ್ಯಪ್ರದೇಶದ ಭೂಪಾಲ್‌ ಮೂಲದ ಸೈಯದ್‌ ಇರ್ಫಾನ್‌ ರಿಜ್ಜಿ (34) ಬಂಧಿತ. ಈತನಿಂದ 3 ಕಂಟ್ರಿಮೆಡ್‌ ಪಿಸ್ತೂಲ್‌, 1 ರಿವಾಲ್ವರ್‌ ಹಾಗೂ 2 ಜೀವಂತ ಗುಂಡು ವಶಕ್ಕೆ ಪಡೆಯಲಾಗಿದೆ. ಆರೋಪಿ ಈ ಹಿಂದೆ ನಗರದ ರೌಡಿಶೀಟರ್‌ ಮಸೂದ್‌, ಜಾವೀದ್‌ ಎಂಬುವ ರಿಗೆ ಗನ್‌ ಮಾರಾಟ ಮಾಡಿದ್ದ. ವಿಚಾರಣೆ ವೇಳೆ ಇರ್ಫಾನ್‌ ಬಗ್ಗೆ ಮಾಹಿತಿ ನೀಡಿದ್ದ. ಈ ಹಿನ್ನೆಲೆ ಯಲ್ಲಿ ಸಿಸಿಬಿ ಎಸಿಪಿ ಎಚ್‌.ಕೆ.ಮಹಾನಂದ್‌, ತಂಡ ಭೂಪಾಲ್‌ಗೆ ತೆರಳಿ ಆರೋಪಿಯನ್ನು ಮಾಲು ಸಮೇತ ಬಂಧಿಸಿದೆ. ಈ ಹಿಂದೆ ಬಂಧನಕ್ಕೊಳಗಾದ ಆರೋಪಿಗಳ ಪೈಕಿ ಮಸೂದ್‌ ವಿಚಾರಣೆಯಲ್ಲಿ, ತಾನೂ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದು, ಆಕೆಯ ತಂದೆ ತನ್ನೊಂದಿಗೆ ಮದುವೆ ಮಾಡಿಕೊಡಲು ಹಿಂದೇಟು ಹಾಕಿದ್ದರು. ಹೀಗಾಗಿ ಭಾವಿ ಮಾವನ ಹೆದರಿಸಲು ಭೂಪಾಲ್‌ನ ಸೈಯದ್‌ನಿಂದ ಪಿಸ್ತೂಲ್‌ ಖರೀದಿ ಸಿದ್ದೆ ಎಂದು ಒಮ್ಮೆ ಹೇಳಿದರೆ, ಮತ್ತೂಮ್ಮೆ ಭೂಪಾಲ್‌ನಲ್ಲಿ ನಡೆಯುವ ಕುರಿ ಕಾಳಗಕ್ಕೆ ಹೋದಾಗ ರಕ್ಷಣೆಗಾಗಿ ಪಿಸ್ತೂಲ್‌ ಖರೀದಿಸಿ ದ್ದಾಗಿ ಹೇಳುತ್ತಾನೆಂದು ಪೊಲೀಸರು ತಿಳಿಸಿದ್ದಾರೆ.

Share News

About BigTv News

Check Also

ಅತ್ಯಾಚಾರ ಎಸೆಗಿದವರ ಮೇಲೆ‌ ಪ್ರತೀಕಾರ – ಅಪಹರಣ ಮಾಡಿ ಸಿಕ್ಕಿಬಿದ್ದ ಆರೋಪಿಗಳು!

ಬೆಂಗಳೂರು: ಮಾರತ್ತಹಳ್ಳಿಯಲ್ಲಿ ಸ್ನೇಹಿತನ ಪ್ರೇಯಸಿಯನ್ನು ಕಾಲ್‌ಗರ್ಲ್ ಎಂದು ತಪ್ಪಾಗಿ ಭಾವಿಸಿ ಅತ್ಯಾಚಾರ ಎಸಗಿದ ಆರೋಪದ ಹಿನ್ನೆಲೆಯಲ್ಲಿ, ಪ್ರತೀಕಾರಕ್ಕಾಗಿ ಇಬ್ಬರನ್ನು ಅಪಹರಿಸಿ …

Leave a Reply

Your email address will not be published. Required fields are marked *