Breaking News

ಕೊಲೆ ಪ್ರಕರಣದಲ್ಲಿ ಶವ ಹೊರತೆಗೆಯಲು ಸಮಾಧಿ ಅಗೆತ – ಕೋಳಿ ಬಲಿ ಕೊಡಲು ಮುಂದಾದ ಆಡಳಿತ!

ಬೆಳಗಾವಿ: ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಪತಿಯನ್ನು ಹತ್ಯೆ ಮಾಡಿ ಜಮೀನಿನಲ್ಲಿ ಹೂತು ಹಾಕಿದ್ದ ಪ್ರಕರಣದ ತನಿಖೆ ವೇಳೆ, ಶವ ಹೊರತೆಗೆಯುವ ಮುನ್ನ ಕೋಳಿ ಬಲಿ ನೀಡಲು ಮುಂದಾದ ಘಟನೆ ಚಿಕ್ಕೋಡಿ ತಾಲೂಕಿನ ಖಡಕಲಾಟ ಗ್ರಾಮದಲ್ಲಿ ನಡೆದಿದೆ. ರಾಘು ಗಾವಡೆ (40) ಅವರನ್ನು ಹತ್ಯೆ ಮಾಡಿ ಅವರದೇ ಜಮೀನಿನಲ್ಲಿ ಹೂತು ಹಾಕಲಾಗಿತ್ತು ಎನ್ನಲಾಗಿದ್ದು, ಪೊಲೀಸರು ಶವ ಹೊರತೆಗೆದು ಮರಣೋತ್ತರ ಪರೀಕ್ಷೆ ಹಾಗೂ ವೈಜ್ಞಾನಿಕ ಸಾಕ್ಷ್ಯ ಸಂಗ್ರಹಕ್ಕೆ ಸಿದ್ಧತೆ ನಡೆಸಿದ್ದರು. ಈ ವೇಳೆ ಸ್ಥಳದಲ್ಲಿದ್ದ ಕೆಲವರು ಶಾಸ್ತ್ರ-ಸಂಪ್ರದಾಯದ ಹೆಸರಿನಲ್ಲಿ ಕೋಳಿ ಬಲಿ ನೀಡಲು ಮುಂದಾಗಿದ್ದರು ಎನ್ನಲಾಗಿದೆ. ಮಾಧ್ಯಮದವರು ಚಿತ್ರೀಕರಣ ಆರಂಭಿಸುತ್ತಿದ್ದಂತೆ ಬಲಿಗೆ ತಂದಿದ್ದ ಕೋಳಿಯನ್ನು ಸ್ಥಳದಿಂದ ವಾಪಸ್ ಕರೆದೊಯ್ದಿದ್ದಾರೆ ಎನ್ನಲಾಗಿದೆ. ತನಿಖೆಯಂತಹ ಸೂಕ್ಷ್ಮ ಪ್ರಕ್ರಿಯೆಯಲ್ಲಿ ಮೂಢನಂಬಿಕೆಯ ಆಚರಣೆಗೆ ಅವಕಾಶ ನೀಡಿದ ವಿಚಾರ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

Share News

About BigTv News

Check Also

ಬೆಂಗಳೂರು | ಸಿಕ್ಕವರ ಮೇಲೆ ಮಚ್ಚು ಬೀಸಿದ ದುಷ್ಕರ್ಮಿಗಳು: ಎಂಟು ಮಂದಿಗೆ ಗಾಯ

ಬೆಂಗಳೂರು: ಮಾಸ್ಕ್ ಧರಿಸಿ ನಾಲ್ಕು ಬೈಕ್‌ಗಳಲ್ಲಿ ಬಂದಿದ್ದ ಎಂಟು ಮಂದಿ ದುಷ್ಕರ್ಮಿಗಳು ಉತ್ತರಹಳ್ಳಿ ಮುಖ್ಯರಸ್ತೆ ಹಾಗೂ ಅರಹಳ್ಳಿ ಗೇಟ್ ಬಳಿ …

Leave a Reply

Your email address will not be published. Required fields are marked *