Breaking News

ಪಟ್ಟಣ ಠಾಣೆಯ ಕ್ಷಿಪ್ರ ಕಾರ್ಯಚಾರಣೆ; ಗಾಂಜಾ ವ್ಯಸನಿ ಬಂಧನ

ಹುಣಸೂರು: ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ರೆಹಮತ್ ಮೊಹಲ್ಲ ಮೈದಾನದ ಬಳಿಯಿರುವ ಖಾಲಿ ಜಾಗದ ಬಳಿ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಒಬ್ಬ ಗಾಂಜಾ ಸೇವಿಸುತ್ತಿದ್ದ ಹುಣಸೂರು ಟೌನ್ ನಿವಾಸಿ ಯುವಕನೊಬ್ಬನನ್ನು ಬಂಧಿಸಿದ ಘಟನೆ ಮಾ.26ರ ಗುರುವಾರ ನಡೆದಿದೆ. ಹುಣಸೂರು ಟೌನ್ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಸಂತೋಷ್ ಕಶ್ಯಪ್ ಆರ್.ಅವರ ಮಾರ್ಗದರ್ಶನದಲ್ಲಿ ಪಿ.ಎಸ್.ಐ. ಮಹಾಲಿಂಗಯ್ಯ ಆರ್. ಹಾಗೂ ಹೆಚ್.ಸಿ. 130 ಅರುಣ್. ಹೆಚ್.ಎನ್., ಹೆಚ್.ಸಿ. 133 ಮಂಜುನಾಥ್ (ಗಿಲ್ಲಿ), ಪಿಸಿ-363 ಇರ್ಪಾನ್, ಅವರ ತಂಡ ಗಾಂಜಾ ವ್ಯಸನಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿ ಬಂಧಿಸಲಾಗಿದೆ. ಹುಣಸೂರು ಟೌನ್ ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್. ಕಾಯ್ದೆ ಅಡಿಯಲ್ಲಿ ಎಫ್.ಐ.ಆರ್. ದಾಖಲಿಸಿಕೊಂಡು ಕಾನೂನು ರೀತಿಯ ಕ್ರಮ ಜರುಗಿಸಲಾಗಿದೆ.‌

Share News

About BigTv News

Check Also

ಸರಗಳ್ಳತನ ಮಾಡುತ್ತಿದ್ದ ಅಪ್ರಾಪ್ತ ಸೇರಿ ಇಬ್ಬರು ಆರೋಪಿಗಳ ಬಂಧನ

ಬೆಂಗಳೂರು: ಅಪ್ರಾಪ್ತ ಬಾಲಕನೊಂದಿಗೆ ಸೇರಿ ಮಹಿಳೆಯರ ಚಿನ್ನದ ಮಾಂಗಲ್ಯ ಸರ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಡೇಪಾಳ್ಯ ಪೊಲೀಸರು ವಶಕ್ಕೆ …

Leave a Reply

Your email address will not be published. Required fields are marked *