ಮಂಗಳೂರು: MULTI SCATTER PRAGMATIC ಮೂಲಕ ಆನ್‌ಲೈನ್ ಗ್ಯಾಂಬ್ಲಿಂಗ್ ಗೇಮ್ ನೆಪದಲ್ಲಿ ಸಾರ್ವಜನಿಕರು ಮತ್ತು ಹಿರಿಯ ನಾಗರಿಕರನ್ನು ಸಂಪರ್ಕಿಸಿ ಸೈಬರ್ ವಂಚನೆ ಎಸಗುವ ಉದ್ದೇಶದಿಂದ ಮಂಗಳೂರು ಸಿಟಿ ಪೊಲೀಸ್ ಎಂಬ ಹೆಸರಿನಲ್ಲಿ ನಕಲಿ ವೆಬ್‌ಸೈಟ್ ತೆರೆದ ಕೃತ್ಯಕ್ಕೆ ಸಂಬಂಧಿಸಿ ಮಂಗಳೂರು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾ.25ರ ಸಂಜೆ 5ಕ್ಕೆ ತಾನು ಗೂಗಲ್ ಪರಿಶೀಲಿಸುತ್ತಿರುವಾಗ ಯಾರೋ ಅಪರಿಚಿತರು ಮಂಗಳೂರು ಸಿಟಿ ಪೊಲೀಸ್ ಎಂಬ ವೆಬ್‌ಸೈಟ್ ತೆರೆದಿರುವುದು ಕಂಡು ಬಂದಿದೆ. ಮಂಗಳೂರು ನಗರ ಪೊಲೀಸರ ಹೆಸರನ್ನು ಬಳಸಿಕೊಂಡು ನಕಲಿ ವೆಬ್‌ಸೈಟ್ ತೆರೆದು ಆ ಮೂಲಕ ಆನ್‌ಲೈನ್ ಸೈಬರ್ ವಂಚನೆ ಮಾಡುತ್ತಿರುವವರ ಹಾಗೂ ನಕಲಿ ವೆಬ್‌ಸೈಟ್ ತೆರೆದವರ ಹಾಗೂ ಆನ್‌ಲೈನ್ ಗ್ಯಾಂಬ್ಲಿಂಗ್ ನಡೆಸುತ್ತಿರುವವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಸೈಬರ್ ಕ್ರೈಂ ಠಾಣೆಯ ಎಸ್ಸೈ ರೇವಣ ಸಿದ್ದಪ್ಪ ದೂರಿನಲ್ಲಿ ತಿಳಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

