Breaking News

ಜ್ಯುವೆಲ್ಲರಿ ಶಾಪ್‌ನಲ್ಲಿ ಗ್ರಾಹಕರ ಸೋಗಿನಲ್ಲಿ ಚಿನ್ನ ಕದ್ದ ಮಹಿಳೆ ಬಂಧನ

ಬೆಂಗಳೂರು: ಗ್ರಾಹಕರ ಸೋಗಿನಲ್ಲಿ ಚಿನ್ನದ ಅಂಗಡಿಗೆ ಹೋಗಿ ಸರ ಲಪಟಾಯಿಸಿದ್ದ ಹೊರ ರಾಜ್ಯದ ಮಹಿಳೆ ಜೆ.ಪಿ.ನಗರ ಠಾಣೆ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾಳೆ. ಆಕೆಯಿಂದ 1.34 ಲಕ್ಷ ರೂ. ಮೌಲ್ಯದ ಚಿನ್ನದ ಸರ ಜಪ್ತಿ ಮಾಡಲಾಗಿದೆ. ಜೆ.ಪಿ.ನಗರದ 3ನೇ ಹಂತ 8ನೇ ಮುಖ್ಯ ರಸ್ತೆಯಲ್ಲಿರುವ ಜ್ಯುವೆಲ್ಲರಿ ಮಳಿಗೆಗೆ ಮಾ.12ರಂದು ಮಹಿಳೆಯೊಬ್ಬಳು ಗ್ರಾಹಕರ ಸೋಗಿನಲ್ಲಿ ಹೋಗಿ ಚಿನ್ನದ ಸರ ತೋರಿಸುವಂತೆ ಹೇಳಿದ್ದಳು. ಅಂಗಡಿಯ ಸಿಬ್ಬಂದಿ ಸರಗಳಿದ್ದ ಬಾಕ್ಸ್‌ ಅನ್ನು ತೆರೆದು ಚಿನ್ನದ ವಿವಿಧ ಮಾದರಿಯ ಸರಗಳನ್ನು ತೋರಿಸಿದ್ದರು. ಆ ವೇಳೆ ಸಿಬ್ಬಂದಿಯ ಗಮನವನ್ನು ಬೇರೆಡೆ ಸೆಳೆದ ಮಹಿಳೆಯು, 1 ಚಿನ್ನದ ಸರವನ್ನು ಕಳ್ಳತನ ಮಾಡಿಕೊಂಡು ಅಂಗಡಿಯಿಂದ ತೆರಳಿದ್ದಳು. ಇತ್ತ, ಮಾ.15ರಂದು ಜ್ಯುವೆಲ್ಲರಿಯ ಬ್ರ್ಯಾಂಚ್ ಮ್ಯಾನೇಜರ್‌ ಅವರು ಅಂಗಡಿಯಲ್ಲಿರುವ ಚಿನ್ನಾಭರಣಗಳನ್ನು ಪರಿಶೀಲನೆ ಮಾಡುವ ವೇಳೆ 1 ಚಿನ್ನದ ಸರ ಇಲ್ಲದಿರುವುದು ಕಂಡು ಬಂದಿತ್ತು. ಕೂಡಲೇ ಅವರು ಮಳಿಗೆಯಲ್ಲಿರುವ ಸಿಸಿ ಕ್ಯಾಮೆರಾ ಪರಿಶೀಲನೆ ಮಾಡಿದ ವೇಳೆ ಆರೋಪಿತ ಮಹಿಳೆಯ ಕೈ ಚಳಕ ಪತ್ತೆಯಾಗಿತ್ತು.

Share News

About BigTv News

Check Also

ಬೆಂಗಳೂರು: ಪಬ್‌ನಲ್ಲಿ ಲೈಟರ್ ಕೇಳಿ ಪರಿಚಯವಾದ ರಾಜಸ್ಥಾನದ ಯುವತಿಯ ಹೋಟೆಲ್‌ಗೆ ಕರೆದೊಯ್ದು ಅತ್ಯಾಚಾರ ಎಸಗಿದ ಆರೋಪಿಯ ಬಂಧನ

ಬೆಂಗಳೂರು: ರಾಜಸ್ಥಾನದ ಜೈಪುರದಿಂದ ಬೆಂಗಳೂರಿಗೆ ಬಂದಿದ್ದ ಯುವತಿಯೊಬ್ಬರಿಗೆ ಕೋರಮಂಗಲದ ಪಬ್‌ನಲ್ಲಿ ಸಮೀರ್ ಎಂಬಾತ ಪರಿಚಯವಾಗಿದ್ದಾನೆ. ಸಿಗರೇಟ್ ಸೇದಲು ಲೈಟರ್ ಕೇಳಿದಾಗ …

Leave a Reply

Your email address will not be published. Required fields are marked *