Breaking News

ಹೊಲದಲ್ಲಿ ಗಾಂಜಾ ಬೆಳೆದ ವ್ಯಕ್ತಿಯ ಬಂಧನ

ಬೆಳಗಾವಿ: ಸಮೀಪದ ಮುಗಳಿಹಾಳ ಗ್ರಾಮದ ಹೊಲದಲ್ಲಿ ಗಾಂಜಾ ಗಿಡ ಬೆಳೆದಿದ್ದ ವ್ಯಕ್ತಿಯನ್ನು ಮುರಗೋಡ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಮುಗಳಿಹಾಳ ಗ್ರಾಮದ ಸಾಬಣ್ಣಾ ಬಸಪ್ಪ ದಳವಾಯಿ ಎಂದು ಗುರುತಿಸಲಾಗಿದೆ. ಆರೋಪಿಯಿಂದ ಸುಮಾರು 19 ಗಾಂಜಾ ಗಿಡಗಳನ್ನು ವಶಪಡಿಸಿಕೊಳ್ಳಲಾಗಿದೆ. ಹೊಲದಲ್ಲಿ ಗಾಂಜಾ ಬೆಳೆದಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಮುರಗೋಡ ಪೊಲೀಸ್ ಠಾಣೆಯ ಸಿಪಿಐ ಐ.ಎಂ. ಮಠಪತಿ, ಪಿಎಸ್‌ಐ ಎಲ್.ಬಿ. ಮಾಳಿ, ಎಎಸ್‌ಐ ಬಿ.ಕೆ. ರಂಗಣ್ಣವರ ಹಾಗೂ ಸಿಬ್ಬಂದಿಗಳಾದ ವಿಠ್ಠಲ ಭಾಂಗಿ, ಎಂ.ಬಿ. ಸಣ್ಣನಾಯ್ಕ, ರಮೇಶ ತೇಲಿ, ಈರಣ್ಣ ವಕ್ಕುಂದ ಮತ್ತು ಪಶುವೈದ್ಯಾಧಿಕಾರಿ ಎಂ.ವಿ. ಪಾಟೀಲ ಅವರ ತಂಡ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದೆ. ಈ ಸಂಬಂಧ ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Share News

About BigTv News

Check Also

ಹೋಟೆಲ್ ಬಿಲ್ ಕೇಳಿದ್ದಕ್ಕೆ ಮಾಲೀಕನ ಮೇಲೆ ಮಾರಣಾಂತಿಕ ಹಲ್ಲೆ!

ದೊಡ್ಡಬಳ್ಳಾಪುರ: ಹೋಟೆಲ್‌ನಲ್ಲಿ ಬಿಲ್ ಕೇಳಿದ್ದಕ್ಕೆ ಮಾಲೀಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ …

Leave a Reply

Your email address will not be published. Required fields are marked *