Breaking News
Oplus_131072

ನಕಲಿ ಆಧಾರ್ ಕಾರ್ಡ್ ತಯಾರು! ಇಬ್ಬರ ವಿರುದ್ಧ ಪ್ರಕರಣ ದಾಖಲು

ರಾಮನಗರ: ಐಜೂರು ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ನಕಲಿ ಆಧಾರ್ ಕಾರ್ಡ್ ಸೃಷ್ಟಿಸಿ, ನ್ಯಾಯಾಲಯದಲ್ಲಿ ಜಾಮೀನು ಪಡೆದ ಇಬ್ಬರು ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕು ಮೇಲುಕೋಟೆ ಹೋಬಳಿ ಹೊಸಕೋಟೆ ಗ್ರಾಮದ ಬೆಟ್ಟೇಗೌಡ ಬಿನ್ ನರಸಿಂಹೇಗೌಡ ಮತ್ತು ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕು ಕಸಬಾ ಹೋಬಳಿಯ ಟಿ.ಹೊಸಹಳ್ಳಿ ಗ್ರಾಮದ ಜಿ.ಬಿ.ಮಂಜುನಾಥ ಬಿನ್ ಭದ್ರಯ್ಯ ಈ ಪ್ರಕರಣದ ಆರೋಪಿಗಳಾಗಿದ್ದಾರೆ. ಮಾ.13ರಂದು ರಾಮನಗರದ ಹಿರಿಯ ಶಿರಸ್ತೇದಾರರು, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಮುಖ್ಯ ನ್ಯಾಯಿಕ ದಂಡಾಧಿಕಾರಿ ಕಚೇರಿ ಶ್ರೀನಿವಾಸ್ ನೀಡಿದ ದೂರಿನ ಮೇರೆಗೆ ಐಜೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹೊಸಕೋಟೆ ಗ್ರಾಮದ ಬೆಟ್ಟೇಗೌಡ ಅವರು ಬೇರೆ ಬೇರೆ ವಿಳಾಸಗಳ ಎರಡು ನಕಲಿ ಆಧಾರ್ ಕಾರ್ಡ್‌ ಸೃಷ್ಟಿಸಿ, ಹಾಸನ ಜಿಲ್ಲೆ ಸೆಷನ್ಸ್ ನ್ಯಾಯಾಲಯ ಮತ್ತು ರಾಮನಗರ ಸೆಷನ್ಸ್ ನ್ಯಾಯಾಲಯದಲ್ಲಿ ಎರಡು ವಿಭಿನ್ನ ಪ್ರಕರಣಗಳಿಗೆ ಜಾಮೀನು ಪಡೆದುಕೊಂಡಿದ್ದಾರೆ. ಅದೇ ರೀತಿ ಟಿ.ಹೊಸಹಳ್ಳಿ ಗ್ರಾಮದ ಜಿ.ಬಿ. ಮಂಜುನಾಥ್ ಅವರು ರಾಮನಗರ ಸೆಷನ್ಸ್ ನ್ಯಾಯಾಲಯ ಮತ್ತು ಚನ್ನಪಟ್ಟಣದ ಹೆಚ್ಚುವರಿ ನ್ಯಾಯಾಲಯದಲ್ಲಿ ಎರಡು ಬೇರೆ ಬೇರೆ ಪ್ರಕರಣಗಳಿಗೆ ವಿಭಿನ್ನ ಆಧಾರ್ ಕಾರ್ಡ್ ಸಲ್ಲಿಸಿ ಜಾಮೀನುದಾರರಾಗಿದ್ದರು.

Share News

About BigTv News

Check Also

ಹೋಟೆಲ್ ಬಿಲ್ ಕೇಳಿದ್ದಕ್ಕೆ ಮಾಲೀಕನ ಮೇಲೆ ಮಾರಣಾಂತಿಕ ಹಲ್ಲೆ!

ದೊಡ್ಡಬಳ್ಳಾಪುರ: ಹೋಟೆಲ್‌ನಲ್ಲಿ ಬಿಲ್ ಕೇಳಿದ್ದಕ್ಕೆ ಮಾಲೀಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ …

Leave a Reply

Your email address will not be published. Required fields are marked *