Breaking News

ಕನ್ನೊಳ್ಳಿ ಅಪಘಾತ ಪ್ರಕರಣಕ್ಕೆ ತಿರುವು: ಯುವಕ ಆತ್ಮಹತ್ಯೆ ಶಂಕೆ

ವಿಜಯಪುರ: ಜಿಲ್ಲೆಯ ಸಿಂದಗಿ ತಾಲೂಕಿನ ಕನ್ನೊಳ್ಳಿ ಟೋಲ್‌ಗೇಟ್ ಸಮೀಪ ಮಂಗಳವಾರ ಭೀಕರ ರಸ್ತೆ ಅಪಘಾತ ಸಂಭವಿಸಿ ಬೈಕ್ ಸವಾರೊಬ್ಬರು ಸಜೀವ ದಹನಗೊಂಡ ಪ್ರಕರಣಕ್ಕೆ ಬೇರೆ ತಿರುವು ದೊರಕಿದ್ದು, ಆತ್ಯಹತ್ಮೆಯ ಶಂಕೆ ವ್ಯಕವಾಗಿದೆ. ಮೃತರನ್ನು ದೇವರ ಹಿಪ್ಪರಗಿ ಪಟ್ಟಣದ ಮುಳಸಾವಳಗಿ ಗ್ರಾಮದ ನಿವಾಸಿ ಅಭಿಷೇಕ್ ಸಾಯಬಾಗೌಡ ನಾಗರಾಳ (19) ಎಂದು ಗುರುತಿಸಲಾಗಿದೆ. ಅಭಿಷೇಕ್ ಸಾಯಬಾಗೌಡ ನಾಗರಾಳ ಈ ಘಟನೆಗೂ ಮುನ್ನ ವಿಡಿಯೋ ಮಾಡಿ ಇನ್‌ಸ್ಟಾಗ್ರಾಂ ಹರಿಬಿಟ್ಟಿದ್ದಾರೆ. ಮೂವರ ಹೆಸರು ಉಲ್ಲೇಖಿಸಿ ನನ್ನ ಸಾವಿಗೆ ಅವರೇ ಕಾರಣ, ನಾನು ಪ್ರೀತಿಸಿದ ಹುಡುಗಿಯನ್ನು ನನ್ನಿಂದ ಅವರು ದೂರ ಮಾಡಿದ್ದಾರೆ. ಅವಳಿಲ್ಲದೇ ನಾನು ಬದುಕಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಈ ಘಟನೆಯ ನಂತರ ಕನ್ನೊಳ್ಳಿ ಟೋಲ್ ಗೇಟ್ ಬಳಿ ದುರ್ಘಟನೆ ನಡೆದಿದೆ. ಆರಂಭದಲ್ಲಿ ಇದನ್ನು ಅಪಘಾತ ಎನ್ನಲಾಗಿತ್ತು. ಘಟನೆಯಲ್ಲಿ ಬೈಕ್ ಮೇಲಿದ್ದ ಅಭಿಷೇಕ್ ಸಂಪೂರ್ಣವಾಗಿ ಸಜೀವ ದಹನಗೊಂಡಿದ್ದರು. ಇನ್‌ಸ್ಟಾಗ್ರಾಂ ಪೋಸ್ಟ್ ನಲ್ಲಿ ಯುವಕ ಹರಿಬಿಟ್ಟಿದ್ದ ವಿಡಿಯೋ ಇಡೀ ಪ್ರಕರಣಕ್ಕೆ ತಿರುವು ಕೊಟ್ಟಿದೆ. ಪ್ರೇಮ ವೈಫಲ್ಯದಿಂದ ಈ ರೀತಿಯಲ್ಲಿ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಶಂಕಿಸಲಾಗಿದ್ದು, ಜನತೆಯಲ್ಲಿ ಆತಂಕ ಮೂಡಿಸಿದೆ.

Share News

About BigTv News

Check Also

ಹೋಟೆಲ್ ಬಿಲ್ ಕೇಳಿದ್ದಕ್ಕೆ ಮಾಲೀಕನ ಮೇಲೆ ಮಾರಣಾಂತಿಕ ಹಲ್ಲೆ!

ದೊಡ್ಡಬಳ್ಳಾಪುರ: ಹೋಟೆಲ್‌ನಲ್ಲಿ ಬಿಲ್ ಕೇಳಿದ್ದಕ್ಕೆ ಮಾಲೀಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ …

Leave a Reply

Your email address will not be published. Required fields are marked *