ಬೆಂಗಳೂರು: ರ್ಯಾಪಿಡೋ ಚಾಲಕನೋರ್ವ ಯುವತಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಯುವತಿಯೋರ್ವಳು ಬಿಟಿಎಂ ಲೇಔಟ್‌ನಿಂದ ಇಂದಿರಾನಗರಕ್ಕೆ ಬೈಕ್ ಬುಕ್ ಮಾಡಿದ್ದಳು. ಬಳಿಕ ಬೈಕ್‌ನಲ್ಲಿ ಬರುವಾಗ ಚಾಲಕ ಮೊಹಮ್ಮದ್ ಖಾಜಾ, ದಾರಿಯುದ್ದಕ್ಕೂ ಮೈಮುಟ್ಟಿ ಅಸಭ್ಯ ವರ್ತಿಸಿದ್ದಾನೆಂದು ಯುವತಿ ಆರೋಪಿಸಿದ್ದು, ಈ ಸಂಬಂಧ ಯುವತಿ ದೂರು ನೀಡಿದ್ದಾಳೆ. ಇದರ ಮೇರೆಗೆ ಇದೀಗ ಇಂದಿರಾನಗರ ಠಾಣೆ ಪೊಲೀಸರು ರ್ಯಾಪಿಡೋ ಚಾಲಕ ಮೊಹಮ್ಮದ್ ಖಾಜಾ ಎನ್ನುವಾತನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news
