Breaking News

ಫೆಬ್ರವರಿಯಲ್ಲಿ ವಿಶ್ವ ವಿಪ್ರ ಮಹಾಹಬ್ಬ; ಪೂರ್ವ ಸಿದ್ದತಾ ಸಭೆ

ಹುಬ್ಬಳ್ಳಿ: ವಿಶ್ವ ವಿಪ್ರ ಸಮಾವೇಶ-2023 ನ್ನು ಅತ್ಯಂತ ಯಶಸ್ವಿಯಾಗಿ ಹುಬ್ಬಳ್ಳಿಯಲ್ಲಿ, ಮಾಡಲು ವಿಶ್ವ ವಿಪ್ರ ಸೇವಾ ಟ್ರಸ್ಟ್ ಪೂರ್ವ ಸಿದ್ಧತಾ ಸಭೆಯನ್ನು ನಗರದ ವಿದ್ಯಾನಗರದ ಸುಧರ್ಮ ಸಭಾಂಗಣದಲ್ಲಿ ಆಯೋಜಿಸಿತ್ತು.

ಈ ಸಭೆಯಲ್ಲಿ ಉತ್ತರ ಕರ್ನಾಟಕದ ಎಲ್ಲ ಜಿಲ್ಲೆ, ತಾಲ್ಲೂಕುಗಳಿಂದ ಪ್ರತಿನಿಧಿಗಳು ಆಗಮಿಸಿ, ಸುಮಾರು 20 ರಿಂದ 25 ಸಾವಿರ ಜನರನ್ನು ಸೇರಿಸಿ ವಿಪ್ರ ಮಹಾ ಸಮಾವೇಶ-2023 ಯಶಸ್ವಿಯಾಗಿ ಫೆಬ್ರುವರಿ ಮೊದಲನೇ ವಾರದಲ್ಲಿ ಹುಬ್ಬಳ್ಳಿಯಲ್ಲಿ ನೆರವೇರಿಸಲು ತೀರ್ಮಾನಿಸಲಾಯಿತು. ಎಲ್ಲ ವೃತ್ತಿಪರರನ್ನು, ಉದ್ಯಮಿಗಳನ್ನು, ಎಲ್ಲ ರಂಗದ ವಿಪ್ರರನ್ನು ಒಗ್ಗಟ್ಟಾಗಿ ಸೇರಿಸಿ ಯಶಸ್ವಿಯಾಗಿ ವಿಪ್ರರ ಮಹಾಹಬ್ಬವನ್ನಾಗಿ ಮಾಡಲು ತೀರ್ಮಾನಿಸಲಾಯಿತು.

ಸಭೆಯು ವೇದಮಾತಾ ಶ್ರೀ ಗಾಯತ್ರಿ ಮಾತೆಗೆ ಪುಷ್ಪಾರ್ಚನೆಯನ್ನು ಮಾಡುವುದರ ಮೂಲಕ ಪ್ರಾರಂಭವಾಯಿತು. ಪ್ರಾಸ್ತಾವಿಕವಾಗಿ ವಿಶ್ವ ವಿಪ್ರ ಸೇವಾ ಟ್ರಸ್ಟ್‌ನ ಅಧ್ಯಕ್ಷರಾದ ಲಕ್ಷ್ಮಣ ಚಿದಂಬರ್ ಕುಲಕರ್ಣಿ ಇವರು ಮಾತನಾಡಿದರು. ಈ ಒಂದು ಸಭೆಯಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಉಪ ಮಹಾಪೌರರು, ವಿಪ್ರ ಪಂಡಿತರು, ವಿಪ್ರ ಗಣ್ಯರು, ಮುಖಂಡರು, ಎಲ್ಲ ವಿಪ್ರ ಸಂಘ-ಸಂಸ್ಥೆಗಳ, ಭಜನಾ ಮಂಡಳಿಗಳ, ಅಷ್ಟೋತ್ತರ ಮಂಡಳಿಗಳ, ರುದ್ರ ಸ್ವಾಹಾಕಾರ ಮಂಡಳಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

Share News

About BigTv News

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *