Breaking News

ಸಾವಿನಲ್ಲಿ ಅಂತ್ಯವಾದ ತಾಯಿ-ಮಗನ ನಡುವಿನ ಜಗಳ..

ಮಂಡ್ಯ: ತಾಯಿ-ಮಗನ ನಡುವೆ ಜಗಳ ನಡೆದು, ಸಾವಿನಲ್ಲಿ ಅಂತ್ಯವಾದ ಘೋರ ದುರಂತ ಮಂಡ್ಯದಲ್ಲಿ ಸಂಭವಿಸಿದೆ.ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ಬೂಕಹಳ್ಳಿ ಕೊಪ್ಪಲು ಗ್ರಾಮದಲ್ಲಿ ಈ ಹೃದಯ ವಿದ್ರಾವಕ ಘಟನೆ ನಡೆದಿದ್ದು, ಮಹದೇವಮ್ಮ(75), ಸುಭಾಷ್ (42) ಸಾವಿನಪ್ಪಿದ ತಾಯಿ ಮಗ.ನಡೆದಿದ್ದೇನು ಎಂದು ನೋಡೋದಾದ್ರೆ, ಪುತ್ರ ಸುಭಾಷ್ ನಿತ್ಯವೂ ಕುಡಿದು ಬಂದು ಗಲಾಟೆ ಮಾಡುತ್ತಿದ್ದ. ಇದರಿಂದ ಬೇಸತ್ತ ತಾಯಿ ಮಾದೇವಮ್ಮ ಮನನೊಂದು15 ದಿನಗಳ ಹಿಂದೆ ಮನೆ ಬಿಟ್ಟು ನಾಪತ್ತೆಯಾಗಿದ್ದಳು. ತಾಯಿ ನಾಪತ್ತೆಯಿಂದ ಭಯಗೊಂಡು ಮಂಗಳವಾರ ಮಗ ಸುಭಾಷ್ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ. ಇಂದು ಕಬ್ಬಿನ ಗದ್ದೆಯಲ್ಲಿ ಮಾದೇವಮ್ಮನ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕೆ.ಆರ್.ಪೇಟೆ. ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Share News

About BigTv News

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *