Breaking News

ವರದಕ್ಷಿಣೆ ಕಿರುಕುಳ : ಹೆಚ್ಚಿನ ಹಣಕ್ಕೆ ಬೇಡಿಕೆ: ಮಹಿಳೆ ಮನೆಯಿಂದ ಹೊರಕ್ಕೆ

ಕಟಪಾಡಿ: ಹೆಚ್ಚಿನ ಹಣವನ್ನು ತರುವಂತೆ ಒತ್ತಾಯಿಸಿ ಪತಿ ಹಾಗೂ ಮನೆಯವರು 5 ½ ತಿಂಗಳ ಮಗುವಿನೊಂದಿಗೆ ಮಹಿಳೆಯನ್ನು ಮನೆಯಿಂದ ಹೊರಗೆ ಹಾಕಿ ಪಡುಬಿದ್ರಿ ಮಾರ್ಗ ಮಧ್ಯದಲ್ಲಿ ಬಿಟ್ಟು ಹೋದ ಘಟನೆಯೊಂದು ವರದಿಯಾಗಿದೆ.. ಮೂಡಬೆಟ್ಟು ಗ್ರಾಮದ ಸರಕಾರಿಗುಡ್ಡೆ ನಿವಾಸಿ ಯಾಸೀರ್‌ ಸಾಬನ್‌ ಅಲಿ ಎಂಬಾತ 2024ರ ಮೇ ತಿಂಗಳಿನಲ್ಲಿ ನಡ್ಸಾಲು ಗ್ರಾಮದ ಶಬ್ರೀನ ಎಂಬ ಯುವತಿಯನ್ನು ಮದುವೆಯಾಗಿದ್ದ. ಅನಂತರದ ದಿನಗಳಲ್ಲಿ ಶಬ್ರೀನ ಅವರಿಗೆ ಪತಿ, ಅವರ ತಂದೆ ಸಾಬನ್‌ ಸಾಹೇಬ್‌, ತಾಯಿ ಅವ್ವಮ್ಮ ಮಾನಸಿಕ ಕಿರುಕುಳವನ್ನು ನೀಡುತ್ತಿದ್ದರು ಎಂದು ದೂರಲಾಗಿದೆ. ಇತ್ತೀಚೆಗೆ ಅದು ತಾರಕಕ್ಕೇರಿದಾಗ ಪತಿಯ ಮನೆಯವರು ಬೈದು, ಜೀವ ಬೆದರಿಕೆ ಒಡ್ಡಿ ಹಲ್ಲೆ ಮಾಡಿ ಮನೆಯಿಂದ ಹೊರಗೆ ಹಾಕಿ ದಾರಿ ಮಧ್ಯೆ ಬಿಟ್ಟು ಹೋದರು ಎಂದು ಹೇಳಲಾಗಿದೆ. ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *